ಕೊನೆಗೂ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ಸಿಕ್ತು ಗ್ರೀನ್ ಸಿಗ್ನಲ್

By Web DeskFirst Published Oct 14, 2018, 8:22 AM IST
Highlights

ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಯಾವಾಗ? ಏನು? ಎನ್ನುವ ವಿವರ ಇಲ್ಲಿದೆ.

ಬೆಂಗ​ಳೂರು, [ಅ. 14]: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. 

ನಿಗ​ಮ ಮಂಡಳಿ ನೇಮ​ಕಾತಿ ಹಾಗೂ ಸಚಿವ ಸಂಪುಟ ವಿಸ್ತ​ರಣೆ ಪ್ರಕ್ರಿ​ಯೆ​ಯನ್ನು ಉಪ ಚುನಾ​ವಣೆ ನಂತರ ನಡೆ​ಸು​ವಂತೆ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚನೆ ನೀಡಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿ​ವೆ.

ಎಚ್‌​ಎ​ಎಲ್‌ ನಿವೃತ್ತ ಉದ್ಯೋ​ಗಿ​ಗ​ಳೊಂದಿಗೆ ಸಂವಾದ ನಡೆ​ಸಲು ಶನಿ​ವಾರ ನಗ​ರಕ್ಕೆ ಆಗ​ಮಿ​ಸಿದ್ದ ರಾಹುಲ್‌ ಗಾಂಧಿ ಅವ​ರನ್ನು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರು ಕುಮಾ​ರ​ಕೃಪ ಅತಿಥಿ ಗೃಹದಲ್ಲಿ ಭೇಟಿ ಮಾಡಿ​ದರು. 

ಈ ವೇಳೆ ನಿಗಮ -ಮಂಡಳಿ ಹಾಗೂ ಸಂಪುಟ ವಿಸ್ತ​ರಣೆ ವಿಚಾ​ರ​ವನ್ನು ಅವರು ರಾಹುಲ್‌ ಗಾಂಧಿ ಬಳಿ ಪ್ರಸ್ತಾ​ಪಿ​ಸಿ​ದರು ಎನ್ನ​ಲಾ​ಗಿ​ದೆ. ಇದಕ್ಕೆ ರಾಹುಲ್‌ ಗಾಂಧಿ ಅವರು ಉಪ ಚುನಾ​ವಣೆ ಮುಗಿ​ಯು​ತ್ತಿ​ದ್ದಂತೆಯೇ ಈ ಪ್ರಕ್ರಿ​ಯೆ​ಯನ್ನು ಕೈಗೊಳ್ಳಿ ಎಂದು ಸೂಚಿ​ಸಿ​ದರು ಎನ್ನ​ಲಾ​ಗಿದೆ. 

ಇದೇ ವೇಳೆ ಉಪ ಚುನಾ​ವ​ಣೆ​ಯಲ್ಲಿ ಮೈತ್ರಿ ಸಫ​ಲ​ವಾ​ಗ​ಬೇಕು ಹಾಗೂ ಎಲ್ಲಾ ಮೂರು ಲೋಕ​ಸಭಾ ಕ್ಷೇತ್ರ​ಗಳ ಉಪ ಚುನಾ​ವ​ಣೆ​ಯನ್ನು ಈ ಮೈತ್ರಿಕೂಟ ಗೆಲ್ಲ​ಬೇಕು. ಏಕೆಂದರೆ, ಈ ಉಪ ಚುನಾ​ವಣೆ ಮುಂದಿನ ಲೋಕ​ಸ​ಭೆ ಚುನಾ​ವ​ಣೆಯನ್ನು ಪ್ರಭಾ​ವಿ​ಸ​ಲಿದೆ. 

ಹೀಗಾಗಿ ಏನೇ ಭಿನ್ನಾ​ಭಿ​ಪ್ರಾ​ಯ​ಗಳು ಇದ್ದರೂ ಅದನ್ನು ಲಕ್ಷಿ​ಸದೆ ಉಪ ಚುನಾ​ವಣೆ ಗೆಲು​ವಿಗೆ ಮೈತ್ರಿಕೂಟದ ನಾಯ​ಕರು ಶ್ರಮಿ​ಸ​ಬೇಕು ಎಂದು ರಾಹುಲ್‌ ಹೇಳಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

click me!