ನಲಪಾಡ್’ಗೆ ಜಾಮೀನು ಮಂಜೂರು ಮಾಡದಂತೆ ಸಿಸಿಬಿ ಅಧಿಕಾರಿಗಳಿಂದ ಕೆವಿಯಟ್ ಸಲ್ಲಿಕೆ

By Suvarna Web DeskFirst Published Mar 21, 2018, 12:54 PM IST
Highlights

ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್’ನಲ್ಲಿಯೂ ಜಾಮೀನು ಮಂಜೂರು ಮಾಡದಂತೆ ರಾಜ್ಯ ಸರ್ಕಾರ ಕೆವಿಯಟ್ ಸಲ್ಲಿಸಿದೆ.

ಬೆಂಗಳೂರು :  ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್’ನಲ್ಲಿಯೂ ಜಾಮೀನು ಮಂಜೂರು ಮಾಡದಂತೆ ರಾಜ್ಯ ಸರ್ಕಾರ ಕೆವಿಯಟ್ ಸಲ್ಲಿಸಿದೆ.

ಸುಪ್ರೀಂಕೋರ್ಟ್’ನಲ್ಲಿ ಮಧ್ಯಂತರ ಆದೇಶ ನೀಡುವ ಮೊದಲು ಅಭಿಪ್ರಾಯ ಹೇಳುವಂತೆ ಮನವಿ ಮಾಡಿದ್ದು ಸಿಸಿಬಿ ಅಧಿಕಾರಿಗಳು ಕೆವಿಯಟ್ ಸಲ್ಲಿಸಿದ್ದಾರೆ.

ನಲಪಾಡ್ ಹಾಗೂ ಗ್ಯಾಂಗ್ ಸುಪ್ರೀಂಕೋರ್ಟ್’ಗೆ ಜಾಮೀನು ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದು, ಇದರ ಮುನ್ಸೂಚನೆ ಹಿನ್ನೆಲೆಯಲ್ಲಿ  ಕೆವಿಯಟ್ ಸಲ್ಲಿಸಲಾಗಿದೆ.

ಜಾಮೀನು ಅರ್ಜಿ ಮಂಜೂರು ಮಾಡುವ ಮೊದಲು ನಮ್ಮ ವಾದವನ್ನು ಆಲಿಸಿ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

click me!