
ವಿಜಯಪುರ (ಮಾ.21): ನನ್ನ ಹಾಗೂ ನನ್ನ ಕುಟುಂಬ ಸುತ್ತುಮುತ್ತಲಿರುವ 12 ಜನರ ಫೋನ್ ಟ್ಯಾಪ್ ಆಗಿದೆ. ನಿನ್ನೆ ಹಾಗೂ ಇವತ್ತು ಬೆಳಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಕೋಡ್ ಆಫ್ ಕಂಡೆಕ್ಟ್ ಒಳಗೆ ಬರುವ ನನ್ನ ಮೇಲೆ ದೊಡ್ಡ ಐಟಿ ರೈಡ್ ಆಗುತ್ತೆ. ನಾಳೆ ಅಥವಾ ಹತ್ತು ದಿನಗಳ ಒಳಗೆ ನನ್ನ ಮೇಲೆ ಐಟಿ ದಾಳಿ ಆಗುವ ಸುಳಿವು ಸಿಕ್ಕಿದೆ. ಬಹಳ ವಿಶ್ವಾಸ ಹಾಗೂ ಅಧಿಕಾರಿಗಳ ಮೂಲಕ ಮಾಹಿತಿ ಸಿಕ್ಕಿದೆ. ನನ್ನ ಮೇಲೆ ಐಟಿ ದಾಳಿ ಮಾಡಲು ತಯಾರು ಮಾಡ್ತಾ ಇದ್ದಾರೆ. ಐಟಿಯನ್ನು ಹೀಗೆ ದುರುಪಯೋಗ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದಿಂದ ಹೋರಾಟ ಮಾಡುತ್ತೇವೆ. ನನ್ನ ಮೇಲೆ ಐಟಿ ದಾಳಿ ಆಗುತ್ತೆ ಎಂದು ಬಹಳ ಖಚಿತವಾಗಿ ಹೇಳುತ್ತೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.