’ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆಂದು ಜನರಲ್ಲಿ ಬಿತ್ತಲು ಡಿಕೆಶಿ ತಂತ್ರ’

By Web DeskFirst Published Oct 19, 2018, 5:11 PM IST
Highlights

ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಕೂಡಲಸಂಗಮದ ಬಸವ ಧಮ೯ ಪೀಠಾದ್ಯಕ್ಷೆ ಮಾತೆ ಮಹಾದೇವಿ ಗುಡುಗಿದ್ದಾರೆ.

ಬಾಗಲಕೋಟೆ, [ಅ.19]: ಲಿಂಗಾಯತ ಧರ್ಮ ವಿಚಾರದ ಬಗ್ಗೆ ಮಾತನಾಡಿದ್ದ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಕೂಡಲಸಂಗಮದ ಬಸವ ಧಮ೯ ಪೀಠಾದ್ಯಕ್ಷೆ ಮಾತೆ ಮಹಾದೇವಿ ಕಿಡಿಕಾರಿದ್ದಾರೆ.

ಇಂದು [ಶುಕ್ರವಾರ] ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ  ಕೂಡಲಸಂಗಮದಲ್ಲಿ ಮಾತನಾದಡ ಅವರು, ಪ್ರತ್ಯೇಕ ಲಿಂಗಾಯತ ಧಮ೯ ವಿಚಾರದಲ್ಲಿ ಡಿಕೆಶಿ ಬಹಳ ವಿಚಿತ್ರವಾದ ಮಾತುಗಳನ್ನಾಡಿದ್ದಾರೆ. ಕೂಡಲೇ ಡಿಕೆ ಶಿವಕುಮಾರ್ ಲಿಂಗಾಯತರ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

ಯಾರು ಏನೇ ಶಿಕ್ಷೆ ಕೊಡ್ಲಿ ಹೇಳಿಕೆ ಬದಲಾಯಿಸಲ್ಲ, ಡಿಕೆಶಿ ಖಡಕ್ ಮಾತು

ಸಿದ್ದರಾಮಯ್ಯನವರಿಂದ ಯಾವುದೋ ಅಪರಾಧವಾದಂತೆ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಲಿಂಗಾಯತ ಧಮ೯ದ ಶಿಫಾರಸ್ಸು ಮಾಡಿದ್ದು ಇದೊಂದು ಐತಿಹಾಸಿಕ ನಿಧಾ೯ರ. ಆದರೂ  ಡಿಕೆ ಶಿವಕುಮಾರ್ ಹೇಳಿಕೆ ನಿಜಕ್ಕೂ ಖಂಡನಾಹ೯.

ರಾಜಕೀಯ ಏಳುಬೀಳುಗಳು ಏನೇ ಇರಲಿ ಅದಕ್ಕೆ ಕಾರಣ ಬೇರೆ ಬೇರೆ ಇರುತ್ತವೆ. ಸಿದ್ದರಾಮಯ್ಯ ಬಸವಣ್ಣನ ತತ್ವದಲ್ಲಿ ನಂಬಿಕೆ ಅಭಿಮಾನ ಇಟ್ಟವರು. ನಾಗಮೋಹನ ದಾಸ ಸಮಿತಿ ನೇಮಕ ಮಾಡಿ ಅದರ ಅಭಿಪ್ರಾಯದಂತೆ ಶಿಫಾರಸ್ಸು ಮಾಡಿ ಉತ್ತಮ ನಿಣ೯ಯ ಮಾಡಿದ್ದಾರೆ. ಇಂತಹ ನಿಣ೯ಯ ತಪ್ಪೆಂದು ಹೇಳೋದು ಡಿಕೆಶಿಯದ್ದು ಬಾಲಿಷತನದ್ದ ಹೇಳಿಕೆ.

ಕಾಂಗ್ರೆಸ್‌ನೊಳಗೆ ‘ಧರ್ಮಯುದ್ಧ’ ಶುರು! ಡಿಕೆಶಿಗೆ ಸ್ವಪಕ್ಷೀಯರಿಂದಲೇ ತಿರುಗೇಟು

ಈ ಹೇಳಿಕೆ ಹಿಂದೆ ರಾಜಕೀಯ ಉದ್ದೇಶ ಇದೆ. ಲೋಕಸಭಾ ಮತ್ತು ಉಪಚುನಾವಣೆಯಲ್ಲಿ ಮತದಾರರನ್ನ ಸೆಳೆಯುವ ತಂತ್ರ. ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆಂದು ಜನರಲ್ಲಿ ಭಾವನೆ ಹುಟ್ಟಿಸಲು ಹೊರಟ ಡಿಕೆಶಿ ಮಾತಿನ ಹಿಂದೆ ಕುತಂತ್ರ ಇದೆ.

ಸಚಿವ ಸಂಪುಟ ನಿಣ೯ಯಿಸೋ ವೇಳೆ ಏಕೆ ಡಿಕೆಶಿ ವಿರೋಧಿಸಲಿಲ್ಲ?. ಆಗ ವಿರೋಧಿಸದೇ ಈಗ ವಿರೋಧಿಸೋದು ರಾಜಕೀಯ ತಂತ್ರ. ಪ್ರತ್ಯೇಕ ಧಮ೯ ಹೋರಾಟ ಬೆಂಬಲದಿಂದ ಕಾಂಗ್ರೆಸ್ ಬಲ ಕಡಿಮೆ ಆಗಿಲ್ಲ.ರಾಜ್ಯದಲ್ಲಿ ಈ ಮೊದಲಿಗಿಂತಲೂ ಹೆಚ್ಚಿನ ಮತಗಳು ಕಾಂಗ್ರೆಸ್ ಗೆ ಬಂದಿವೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದರು.

click me!