ಒಕ್ಕಲಿಗರ ಪ್ರಬಲ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆಯಾ ಎಂಬ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ ಪಾಟೀಲ್ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು, ಅ.19: ಸದ್ಯ ರಾಜ ರಾಜಕಾರಣದಲ್ಲಿ ಉಪಚುನಾವಣೆ ರಂಗೇರಿದೆ. ಇದರ ಮಧ್ಯೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಲಿಂಗಾಯತ ಧರ್ಮದ ಹೇಳಿಕೆ ಬಗ್ಗೆ ಆರೋಪ-ಪ್ರತ್ಯಾರೋಪಗಳು ಜೋರಾಗೆಯೇ ನಡೆದಿವೆ.
ಒಕ್ಕಲಿಗರ ಪ್ರಬಲ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆಯಾ ಎಂಬ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ ಪಾಟೀಲ್ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಎಂ.ಬಿ ಪಾಟೀಲ್ ದೊಡ್ಡವರು. ಅವರಿಗೆ ಉತ್ತರ ಕೊಡುವಷ್ಟು ದೊಡ್ಡವನಲ್ಲ. ನನ್ನ ಓಟು ಬಿಟ್ಟು ಮತ್ತೆ ಯಾರ ಓಟ್ ನ್ನೂ ಹಾಕಿಸುವ ಧೈರ್ಯ ನನಗಿಲ್ಲ. ನನ್ನ ಕ್ಷೇತ್ರ ಬಿಟ್ಟು ಬೇರೆ ಕ್ಚೇತ್ರದಲ್ಲಿ ಯಾರನ್ನು ಗೆಲ್ಲಿಸುವುದಕ್ಕೂ ಶಕ್ತಿ ಇಲ್ಲ. ಅಷ್ಟು ಪ್ರಭಾವಿಯೂ ನಾನಲ್ಲ. ನನ್ನ ಪತ್ನಿ ಓಟ್ ನ್ನ ಕೂಡ ಹಾಕಿಸುವ ಧೈರ್ಯ ಇಲ್ಲ ಎಂದು ಪರೋಕ್ಷವಾಗಿ ಎಂ.ಬಿ ಪಾಟೀಲ್ ಗೆ ಟಾಂಗ್ ಕೊಟ್ಟರು.
ಡಿಕೆಶಿಗೆ ಎಂ.ಬಿ.ಪಾಟೀಲ್ ಸವಾಲು : ಕ್ಷಮೆ ಯಾಚಿಸಲು ಆಗ್ರಹ
ವೈಯಕ್ತಿಕವಾಗಿ ಅವರು ಯಾರಿಗೆ ಬೇಕಾದರೂ ಮತ ಹಾಕಬಹುದು. ಇದು ಪ್ರಜಾಪ್ರಭುತ್ವದ ಸಂವಿಧಾನದ ವ್ಯವಸ್ಥೆ. ನಾನು ಸಾಮಾನ್ಯ ಕಾರ್ಯಕರ್ತ. ಯಾರು ಏನೇ ಶಿಕ್ಷೆ ಕೊಡಲಿ. ನಾನು ಏನು ಮಾತಾಡೊಲ್ಲ. ನನ್ನ ಮನಸ್ಸಿನಲ್ಲಿ ಇರೋದನ್ನ ಹೇಳಿದ್ದೇನೆ. ನನ್ನ ಹೇಳಿಕೆಯನ್ನ ಬದಲಾಯಿಸುವುದಿಲ್ಲ
ರಾಜಕೀಯ ನಾಯಕರು ಧರ್ಮದ ವಿಚಾರಕ್ಕೆ ತಲೆ ಹಾಕಬಾರದೆಂದು ಹೇಳಿದ್ದೇನೆ. ಆತ್ಮ ಸಾಕ್ಷಿಯಾಗಿ ಮಾತನಾಡಿದ್ದೇನೆ. ನಮ್ಮದೇ ಸಮುದಾಯ ಒಕ್ಕಲಿಗರ ಸಂಘದ ವಿಚಾರ ಬಂದಾಗಲೂ ಅಷ್ಟೇ. ಯಾವುದೇ ಕಾರಣಕ್ಕೂ ನಾನು ಇನ್ನು ಮುಂದೆ ಹಸ್ತಕ್ಷೇಪ ಮಾಡುವುದಿಲ್ಲ.
ಸಂಘಕ್ಕೆ ಸಹಾಯ ಬೇಕಾದರೆ ಮಾಡುತ್ತೇನೆ. ಆದರೆ ಸಮಾಜದ ವಿಷಯಕ್ಕೆ ಹೋಗುವುದಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.