ಕಂಬಳ ಕಾಪಾಡಿ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Published : Jan 29, 2017, 04:45 PM ISTUpdated : Apr 11, 2018, 01:00 PM IST
ಕಂಬಳ ಕಾಪಾಡಿ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಸಾರಾಂಶ

ಕಂಬಳ ಆಚರಣೆಗೆ ನಾಳೆ ಹೈಕೋರ್ಟ್ ಅನುಮತಿ ನೀಡಬೇಕೆಂದು ಒತ್ತಾಯಿಸಿ ಕರಾವಳಿ ಮಿತ್ರ ಮಂಡಳಿ ಸಂಘಟನೆ ಸದಸ್ಯರು ಯಶವಂತಪುರ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂಪಾರ್ಕ್ ವರೆಗೆ ಬೈಕ್ ರಾಲಿ ನಡೆಸಿದರು. ಸಂಗೀತ ನಿರ್ದೇಶಕರಾದ  ವಿ.ಮನೋಹರ್,  ಗುರುಕಿರಣ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸೌಂದರ್ಯ ರಮೇಶ್, ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್  ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮಂದಿ ರಾಲಿಯಲ್ಲಿ ಪಾಲ್ಗೊಂಡು ಕಂಬಳ ಪರ ವಿಧೇಯಕ ಮಂಡಿಸಬೇಕೆಂದು ಆಗ್ರಹಿಸಿದರು.

ಕಂಬಳ ಕಾಪಾಡಿ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಸುವರ್ಣ ನ್ಯೂಸ್ ಆರಂಭಿಸಿದ ಅಭಿಯಾನಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇಂದು ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ಬೃಹತ್ ರಾಲಿ ನಡೆಸಿ, ಕಂಬಳ ಕ್ರೀಡೆ ಉಳಿಸುವಂತೆ ಆಗ್ರಹಿಸಿದ್ದಾರೆ.

ಕಂಬಳ ಆಚರಣೆಗೆ ನಾಳೆ ಹೈಕೋರ್ಟ್ ಅನುಮತಿ ನೀಡಬೇಕೆಂದು ಒತ್ತಾಯಿಸಿ ಕರಾವಳಿ ಮಿತ್ರ ಮಂಡಳಿ ಸಂಘಟನೆ ಸದಸ್ಯರು ಯಶವಂತಪುರ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂಪಾರ್ಕ್ ವರೆಗೆ ಬೈಕ್ ರಾಲಿ ನಡೆಸಿದರು. ಸಂಗೀತ ನಿರ್ದೇಶಕರಾದ  ವಿ.ಮನೋಹರ್,  ಗುರುಕಿರಣ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸೌಂದರ್ಯ ರಮೇಶ್, ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್  ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮಂದಿ ರಾಲಿಯಲ್ಲಿ ಪಾಲ್ಗೊಂಡು ಕಂಬಳ ಪರ ವಿಧೇಯಕ ಮಂಡಿಸಬೇಕೆಂದು ಆಗ್ರಹಿಸಿದರು.

ನಾಳೆ ಕರ್ನಾಟಕ ಹೈಕೋರ್ಟ್ ಕಂಬಳ ಆಚರಣೆಗೆ ಅನುಮತಿ ನೀಡದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ಕರಾವಳಿ ಮಿತ್ರ ಮಂಡಳಿ ಎಚ್ಚರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪತ್ನಿಗೆ iPhone 18 Pro Max ಕೊಡಿಸಲು ಅಜ್ಜಿ-ಮುತ್ತಜ್ಜಿಯ ಚಿನ್ನ ಮಾರಿದ ವ್ಯಕ್ತಿ! ಭಾರತದ ಬಿಲಿಯೇನರ್ ಪ್ರತಿಕ್ರಿಯೆ ವೈರಲ್!
ʼಡಿಕೆ ಶಿವಕುಮಾರ್‌ ಸರ್ಕಾರದಲ್ಲಿ ಇನ್ನೂ ಎರಡು ವಿಕೆಟ್ ಪತನʼ ಆರ್‌ ಅಶೋಕ್‌ ಹೇಳಿದ ಸಚಿವರುಗಳು ಯಾರು?