ಪುರುಷ-ತೃತೀಯಲಿಂಗಿ ವಿವಾಹಕ್ಕೆ ಮಾನ್ಯತೆ, ಐತಿಹಾಸಿಕ ತೀರ್ಪು

By Web DeskFirst Published May 22, 2019, 7:32 PM IST
Highlights

ಅದು  ಅಕ್ಟೋಬರ್ 31, 2018 ಅರುಣ್ ಕುಮಾರ್ ಮತ್ತು ಪಿ.ಶ್ರೀಜಾ ತಮಿಳುನಾಡಿನ ಥೂತುಕುಡಿ ದೇವಾಲಯದಲ್ಲಿ ಮದುವೆಯಾಗಿದ್ದರು.  ಆದರೆ ಅವರಿಗೆ ಮದುವೆ ಪ್ರಮಾಣ ಪತ್ರ ಸಿಕ್ಕಿರಲಿಲ್ಲ.  ಶ್ರೀಜಾ ತೃತೀಯ ಲಿಂಗಿ ಎನ್ನುವ ಕಾರಣಕ್ಕೆ ಮ್ಯಾರೆಜ್ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ.

ಚೆನ್ನೈ[ಮೇ. 22]  ಆದರೆ ಮೇ 2019ರ ವೇಳೆಗೆ ಅವರ ಸಮಸ್ಯೆ ಬಗೆಹರಿದಿದೆ.  ಥೂತುಕುಡಿಯ ನೋಂದಣಿ ಕೇಂದ್ರ ಮ್ಯಾರೆಜ್ ಸರ್ಟಿಫಿಕೇಟ್ ನೀಡಿದೆ. ಕುಮಾರ್  ಅವರಿಗೆ 22 ವರ್ಷ ವಾಗಿದ್ದರೆ ಶ್ರೀಜಾ ಅವರಿಗೆ 20 ವರ್ಷ. 

ಸುಲಭವಾಗಿ ಮದುವೆ ಪ್ರಮಾಣ ಪತ್ರ ಸಿಕ್ಕಿತು ಎಂದು ಭಾವಿಸಬೇಡಿ. ದಂಪತಿ ಇದಕ್ಕೆ ಕಾನೂನು ಹೋರಾಟವನ್ನೇ ಮಾಡಿದ್ದಾರೆ. ಮಧುರೈನ ನ್ಯಾಯಾಲಯದಲ್ಲಿ ಹಾಕಿದ್ದ ಅರ್ಜಿ ವಿಚಾರಣೆ ನಂತರ ದಂಪತಿಗೆ ಸರ್ಟಿಫಿಕೇಟ್ ಸಿಕ್ಕಿದೆ.

ಇಲ್ಲಿ ಗಂಡಸ್ರು ಮಿನಿಮಮ್ 5 ಮದುವೆ ಆಗ್ಲೇಬೇಕು..ಇಲ್ಲಾ... ಇದು ರಾಜಾಜ್ಞೆ!

ಏಪ್ರಿಲ್ 22 ರಂದು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಪುರುಷ ಮತ್ತು ತೃತೀಯ ಲಿಂಗಿ ನಡುವಿನ ಮದುವೆಯನ್ನು ಮಾನ್ಯ ಮಾಡಿ ವಿವಾಹ ನೋಂದಣಿ ಮಾಡಿಕೊಂಡು ಪ್ರಮಾಣ ಪತ್ರ ನೀಡಲು ಆದೇಶಿಸಿತ್ತು.

click me!