ಅಮ್ಮನ ಹೊಟ್ಟೆ ಬಗೆದ ದುರುಳರು: ಅಪ್ಪನ ಕೈ ಸೇರುತ್ತಿದ್ದಂತೆ ಕಣ್ಬಿಟ್ಟ ಕಂದ!

Published : May 22, 2019, 04:28 PM IST
ಅಮ್ಮನ ಹೊಟ್ಟೆ ಬಗೆದ ದುರುಳರು: ಅಪ್ಪನ ಕೈ ಸೇರುತ್ತಿದ್ದಂತೆ ಕಣ್ಬಿಟ್ಟ ಕಂದ!

ಸಾರಾಂಶ

ಅಮ್ಮನ ಹೊಟ್ಟೆ ಬಗೆದು ಮಗುವನ್ನು ಹೊರ ತೆಗೆದ ದುರುಳರು| ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕಂದಮ್ಮ| ಅಪ್ಪನ ಕೈ ಸೇರುತ್ತಿದ್ದಂತೆಯೇ ಕಣ್ಬಿಟ್ಟ ಮಗು

ಶಿಕಾಗೋ[ಮೇ.22]: ಕೆಲ ದಿನಗಳ ಹಿಂದಷ್ಟೇ ಮಗು ಪಡೆಯಬೇಕೆಂಬ ದುರಾಸೆಯಿಂದ ಗರ್ಭಿಣಿಯ ಹೊಟ್ಟೆ ಬಗೆದು ಮಗು ಹೊರ ತೆಗೆದ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿನ ಸ್ಥಿತಿ ಗಂಭೀರವಾಗಿತ್ತು ಹಾಗೂ ಯವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಆದರೀಗ ಆಸ್ಪತ್ರೆಯ ಸಿಬ್ಬಂದಿ ಫೋಟೋ ಒಂದನ್ನು ಬಿಡುಗಡೆಗೊಳಿಸಿದ್ದು, ಮಗುವಿನ ಆತ್ಮಸ್ಥೈರ್ಯ ಎಷ್ಟಿದೆ ಎಂಬುವುದಕ್ಕೆ ಉದಾಹರಣೆಯಂತರಿದೆ,.

ತಾಯಿಯ ಹೊಟ್ಟೆ ಬಗೆದು ಮಗುವನ್ನು ಹೊರ ತೆಗೆದ ಕಾರಣ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಆದರೆ ಮಗುವನ್ನು ಬದುಕಿಸಲೇಬೇಕೆಂಬ ಪಣ ತೊಟ್ಟಿದ್ದ ವೈದ್ಯರು, ಹಗಲಿರುಳೆನ್ನದೇ ಪುಟ್ಟ ಮಗುವಿನ ಬಳಿ ಇದ್ದು ಚಿಕಿತ್ಸೆ ನೀಡಿದ್ದರು. ಅತ್ತ ಕುಟುಂಬವೂ ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರು. ಮನೆ ಸೊಸೆಯನ್ನು ಕಳೆದುಕೊಂಡು ಶೋಕವಾಚರಿಸುತ್ತಿದ್ದ ಕುಟುಂಬಕ್ಕೆ ಈ ಪುಟ್ಟ ಕಂದಮ್ಮನಾದರೂ ಬದುಕಿ ಬರಲಿ ಎಂಬ ಆಸೆ. ವೈದ್ಯರ ಫಲ ಹಾಗೂ ಕುಟುಂಬದ ಪ್ರಾರ್ಥನೆಯ ಫಲ ಎಂಬಂತೆ ಮಗು ತನ್ನ ಅಪ್ಪನ ಕೈ ಸೇರುತ್ತಿದ್ದಂತೆಯೇ ಪುಟ್ಟ ಕಣ್ಗಳನ್ನು ತೆರೆದು ಎಲ್ಲರ ಆತಂಕವನ್ನೂ ದೂರ ಮಾಡಿದೆ.

ಹಲವಾರು ದಿನಗಳಿಂದ ಮೌನವಾಗಿದ್ದ ಪುಟ್ಟ ಕಂದ, ತನ್ನ ಕೈ ಸೇರುತ್ತಿದ್ದಂತೆಯೇ ಕಣ್ಣು ಬಿಟ್ಟಿದ್ದನ್ನು ನೋಡಿದ ತಂದೆ ಏನೂ ಹೇಳಲಾರದೆ ಅಳುತ್ತಾ ನಿಂತಿದ್ದಾರೆ. ಒಂದೆಡೆ ಹೆಂಡತಿಯನ್ನು ಕಳೆದುಕೊಂಡ ದುಃಖವಾದರೆ, ಮತ್ತೊಂದೆಡೆ ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂಬ ಖುಷಿ ಆ ತಂದೆಯನ್ನು ಮೌನವಾಗಿಸಿತ್ತು. 

ಮಗುವಿಗಾಗಿ ಗರ್ಭಿಣಿ ಹೊಟ್ಟೆಯನ್ನೇ ಬಗೆದ ಪ್ರೇಮಿಗಳು!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು