
ಬೆಂಗಳೂರು (ನ.22): ಬೆಂಗಳೂರು ವಿಶ್ವವಿದ್ಯಾಲಯ ಅಂಕಪಟ್ಟಿ ಖರೀದಿಯಲ್ಲಿ ದೊಡ್ಡ ಗೋಲ್ ಮಾಲ್ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ. 2015 ರಿಂದ ಇಲ್ಲಿ ತನಕ ಅಂಕಪಟ್ಟಿ ಖರೀದಿಗೆ ಬೆಂಗಳೂರು ವಿವಿ ಟೆಂಡರ್ ಕರೆಯದೇ ಆಂಧ್ರ ಮೂಲದ ಹೈಟೆಕ್ ಅನ್ನೋ ಖಾಸಗಿ ಸಂಸ್ಥೆಗೆ ಕೊಟ್ಟಿದೆ ಎನ್ನುವ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈಗಾಗಲೇ ಸರ್ಕಾರಿ ಅಂಗ ಸಂಸ್ಥೆಯಾದ ಎಂ.ಎಸ್.ಐ.ಎಲ್ ನಿಂದ 9 ಲಕ್ಷ ಅಂಕಪಟ್ಟಿಗಳನ್ನ ವಿವಿಗೆ ನೀಡಿದೆ. ಆದರೆ ಬೆಂಗಳೂರು ವಿಶ್ವವಿದ್ಯಾಲಯ ಈ ಅಂಕಪಟ್ಟಿಗಳನ್ನ ವಿದ್ಯಾರ್ಥಿಗಳಿಗೆ ನೀಡದೇ ಹೈಟೆಕ್ ಕಂಪನಿಯಿಂದ ಖರೀದಿಸಿದ ಕಳಪೆ ಗುಣಮಟ್ಟದ ಅಂಕಪಟ್ಟಿಗಳನ್ನ ವಿದ್ಯಾರ್ಥಿಗಳಿಗೆ ನೀಡಿದೆ. ಸರ್ಕಾರ ಎಂ.ಎಸ್.ಐ.ಎಲ್ ನಿಂದಲೇ ಅಂಕಪಟ್ಟಿಗಳನ್ನ ಖರೀದಿಸಬೇಕು ಅಂತ ಉನ್ನತ ಶಿಕ್ಷಣ ಇಲಾಖೆ ರಾಜ್ಯದ 17 ವಿಶ್ವವಿದ್ಯಾಲಯಗಳಿಗೆ ಆದೇಶ ಮಾಡಿದೆ..ಈ ಆದೇಶವನ್ನ ಬೆಂಗಳೂರು ವಿಶ್ವವಿದ್ಯಾಲಯ, ಗುಲ್ಬರ್ಗಾ ವಿವಿ, ಕುವೆಂಪು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ಸರ್ಕಾರದ ಆದೇಶವನ್ನೇ ಪಾಲನೆ ಮಾಡಿಲ್ಲ..ಕೆಟಿಟಿಪಿ ಕಾಯಿದೆಯನ್ನ ವಿವಿಗಳು ಸಂಪೂರ್ಣವಾಗಿ ಉಲ್ಲಂಘಿಸಿ ಖಾಸಗಿಯವರಿಗೆ ಮಣೆ ಹಾಕುತ್ತಿದ್ದಾರೆ. ಈ ಮೂಲಕ ಖಾಸಗಿ ಕಂಪನಿಗೆ ಮಣೆಹಾಕಿ ಕೋಟಿ ಕೋಟಿ ಹಣವನ್ನ ವಿವಿ ಅಧಿಕಾರಿಗಳು ಗುಳುಂ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.