ನ.3, 4ರಂದು ಮೊದಲ 'ಮಂಗಳೂರು ಲಿಟ್ ಫೆಸ್ಟ್'

By Web DeskFirst Published Oct 25, 2018, 12:25 PM IST
Highlights

ಸಾಹಿತಿಗಳ ಸಂಗಮದೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಮೊದಲ ಸಾಹಿತ್ಯ ಜಾತ್ರೆಗೆ ಮಂಗಳೂರು ಸಜ್ಜಾಗುತ್ತಿದೆ. ನ.3 ಮತ್ತು 4ರಂದು ‘ದಿ ಐಡಿಯಾ ಆಫ್ ಭಾರತ್’ ಪರಿಕಲ್ಪನೆಯಡಿ ‘ಮಂಗಳೂರು ಲಿಟ್ ಫೆಸ್ಟ್ -2018’ ನಡೆಯಲಿದೆ. 

ಮಂಗಳೂರು :  ಮಾಡುತ್ತಿರುವ ಸಾಹಿತಿಗಳ ಸಂಗಮದೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಮೊದಲ ಸಾಹಿತ್ಯ ಜಾತ್ರೆಗೆ ಮಂಗಳೂರು ಸಜ್ಜಾಗುತ್ತಿದೆ. ನ.3 ಮತ್ತು 4ರಂದು ‘ದಿ ಐಡಿಯಾ ಆಫ್ ಭಾರತ್’ ಪರಿಕಲ್ಪನೆಯಡಿ ‘ಮಂಗಳೂರು ಲಿಟ್ ಫೆಸ್ಟ್ -2018’ ನಡೆಯಲಿದೆ. ಈ ಸಾಹಿತ್ಯ ಉತ್ಸವ ಕೇವಲ ಒಂದು ಭಾಷೆಗೆ ಸೀಮಿತವಾಗಿರದೆ ಪಂಚಭಾಷಾ ಸಂಗಮಕ್ಕೆ ಸಾಕ್ಷಿಯಾಗಲಿದೆ.

ಹಿಂದಿ, ಇಂಗ್ಲಿಷ್, ಕನ್ನಡ, ತುಳು, ಕೊಂಕಣಿ ಭಾಷೆಗಳಲ್ಲಿ ಸುಮಾರು 12 ವಿವಿಧ ಗೋಷ್ಠಿಗಳು ನಡೆಯಲಿವೆ. ಇದೇ ವೇಳೆ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ತರಂಗ ಸಂಪಾದಕಿ ಸಂಧ್ಯಾ ಪೈ, ನಿಟ್ಟೆ ವಿವಿ ಕುಲಪತಿ ಡಾ.ವಿನಯ ಹೆಗ್ಡೆ ಈ ಸಾಹಿತ್ಯ ಜಾತ್ರೆಯ ಮುಖ್ಯ ಸಂಯೋಜಕರಾಗಿದ್ದಾರೆ. ಮಂಗಳೂರು ಲಿಟರರಿ ಫೌಂಡೇಶನ್ ಆಯೋಜನೆಯಲ್ಲಿ ನಗರದ ಕೊಡಿಯಾಲ್ ಬೈಲ್ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಹಾಲ್‌ನಲ್ಲಿ ಸಾಹಿತ್ಯ ಉತ್ಸವ ನಡೆಯಲಿದೆ. ಭಾರತೀಯತೆಗಾಗಿ ಬದುಕು-ಬರಹ ಮುಡಿಪಾಗಿಟ್ಟ ವಿಶ್ವಾದ್ಯಂತ ನೆಲೆಸಿರುವ ಸುಮಾರು 45ಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸಲಿದ್ದಾರೆ.

ರಾಜೀವ್ ಮಲ್ಹೋತ್ರ, ಡಾ| ಡೇವಿಡ್ ಫ್ರಾಲೆ, ಅನಿರ್ಬಾನ್ ಗಂಗೂಲಿ, ಶಾಲಿನಿ ಛೋಪ್ರಾ, ಮಧುಕೀಶ್ವರ್, ಅಭಿನವ್ ಪ್ರಕಾಶ್, ಗೌತಮ್ ಚಿಕರ್‌ಮನೆ, ಎಂ. ಆರ್. ವೆಂಕಟೇಶ್, ಶಿಫಾಲಿ ವೈದ್ಯ, ಆನಂದ್ ರಂಗನಾಥನ್, ಚಕ್ರವರ್ತಿ ಸೂಲಿಬೆಲೆ, ರಿಷಭ್ ಶೆಟ್ಟಿ, ಮೇಜರ್ ಗೌರವ್ ವಾರಿಯಾ, ನಂದಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ. 

click me!