
ಮಂಡ್ಯ (ಫೆ. 26): ಪುಲ್ವಾಮಾ ದಾಳಿಗೆ ನಮ್ಮ ಹೆಮ್ಮೆಯ ಭಾರತೀಯ ಸೇನೆ ಏರ್ ಸರ್ಜಿಕಲ್ ಮೂಲಕ ಪಾಕ್ ಗೆ ಉತ್ತರ ಕೊಟ್ಟಿದೆ.
ವಾಯುಪಡೆಯ ನಮ್ಮೀ ಹೀರೋ: ಸಪ್ತ ಸಾಮರ್ಥ್ಯಗಳ 'ಮಿರಾಜ್ 2000'!
ವಿಷಯ ಕೇಳಿ ಮಂಡ್ಯದ ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಎದ್ದು ನಿಂತು ಸೆಲ್ಯೂಟ್ ಹೊಡೆದಿದ್ದಾರೆ. ‘ಭಾರತ ಪ್ರತಿಕಾರ ತೀರಿಸಿಕೊಂಡ ವಿಷಯ ಕೇಳಿ ಸ್ವಲ್ಪ ಖುಷಿಯಾಗಿದೆ. ಆದರೆ ಇಂತಹ ಪ್ರತಿಕಾರದ ದಾಳಿಗಳು ಪಾಕ್ ಮೇಲೆ ನಿಲ್ಲಬಾರದು ಮತ್ತಷ್ಟು ನಡೆಯುತ್ತಿರಬೇಕು‘ ಎಂದು ಕಲಾವತಿ ಹೇಳಿದ್ದಾರೆ.
ಹೀಗಿತ್ತು ಜೋಷ್: ದಾಳಿಗೆ ಹೊರಟಾಗ ಎಲ್ಲಿದ್ರು ಪ್ರಧಾನಿ ಮೋದಿ?
ಪುಲ್ವಾಮದಲ್ಲಿ ನಡೆದ ಉಗ್ರದ ದಾಳಿಗೆ ನನ್ನ ಪತಿ ಗುರು ಹುತಾತ್ಮರಾದ್ರು. ಇಂದು ಯೋಧ ಗುರು 11ನೇ ದಿನದ ಪುಣ್ಯ ತಿಥಿ. ಗುರು ಪುಣ್ಯತಿಥಿ ದಿನದಂದೇ ನಮ್ಮ ಸೇನೆ ಉಗ್ರರ ಮೇಲೆ ಸೇಡು ತೀರಿಸಿಕೊಂಡಿದೆ. ಇಂದು ನಮ್ಮ ಯೋಧರು ನಡೆಸಿದ ದಾಳಿ ನನಗೆ ಖುಷಿ ತಂದಿದೆ. ಪಾಕಿಸ್ತಾನದ ಜೊತೆ ಶಾಂತಿ ಮಾತುಕತೆ ಬೇಡ. ಯುದ್ಧ ನಡೆಯಲೇಬೇಕು ಎಂದಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದಾರೆ. ಸಾವಿಗೆ ಕಾರಣರಾದ ಉಗ್ರರ ದಮನವೇ ಅವರ ಕುಟುಂಬಗಳಿಗೆ, ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತದೆ. ಇಂದು ನಮ್ಮ ಸೇನೆ ಜೈಶ್ ಉಗ್ರರ ಅಡಗುತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಧ್ವಂಸ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.