ಸಿಎಂ ಕುಮಾರಸ್ವಾಮಿ ಪರ ಬಿದರಿ ಬ್ಯಾಟಿಂಗ್

First Published Aug 1, 2018, 11:33 AM IST
Highlights
  • ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ದೂಷಿಸುವುದು ತಪ್ಪು
  • ಉತ್ತರ ಕರ್ನಾಟಕದ ಬಗ್ಗೆ ಎಲ್ಲ ಪಕ್ಷದವರು ಹಾಗೂ ಸರ್ಕಾರದವರು ಅನ್ಯಾಯ ಮಾಡಿದ್ದಾರೆ

ವಿಜಯಪುರ: ಪೊಲೀಸ್ ಅಧಿಕಾರಿ, ರಾಜಕಾರಣಿ ಶಂಕರ್ ಬಿದರಿ ಪ್ರತ್ಯೇಕ ರಾಜ್ಯದ ವಿಚಾರದಲ್ಲಿ  ಸಿಎಂ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಪಾಪ ಕುಮಾರಸ್ವಾಮಿ ಸಿಎಂ ಆಗಿ ಎರಡು ತಿಂಗಳು ಆಗಿದೆ.  ಪ್ರತ್ಯೇಕ ಉತ್ತರ ಕರ್ನಾಟಕ ಬಗ್ಗೆ ಯಾಕೆ ಅವರಿಗೆ ತೊಂದರೆ ಕೊಡುತ್ತೀರಿ, ಈ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ದೂಷಿಸುವುದು ತಪ್ಪು, ಎಂದು ಶಂಕರ್ ಬಿದರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದ ಬಗ್ಗೆ ಎಲ್ಲ ಪಕ್ಷದವರು ಹಾಗೂ ಸರ್ಕಾರದವರು ಅನ್ಯಾಯ ಮಾಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡಿ, ಈ ವಿಚಾರದಲ್ಲಿ  ಪಕ್ಷ ತರಬೇಡಿ.  ಕೇವಲ ಕಲ್ಲಪ್ಪನ ಪಕ್ಷ, ಮಲ್ಲಪ್ಪನ ಪಕ್ಷ, ಇಬ್ರಾಹಿಂ ಪಕ್ಷ ನಮಗೆ ಬೇಕಾಗಿಲ್ಲ, ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು ಎಂದು ಅವರು ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ಸ್ವಲ್ಪ ದಿವಸ ಇರ್ತಾರೆ ಆಮೇಲೆ ಹೋಗುತ್ತಾರೆ ಎಂದ ಬಿದರಿ, ನಾನು ಚಿಲ್ಲರೆ ಪಾಲಿಟಿಕ್ಸ್ ಮಾಡಲು ತಯಾರಿಲ್ಲ. ಎಲ್ಲ ಪಕ್ಷದವರನ್ನು ನಾನು ನೋಡಿದ್ದೇನೆ,  ಎಲ್ಲ ಪಕ್ಷದಲ್ಲಿ ಎಂತಹ ಪರಂ ಪವಿತ್ರರು ಇದ್ದಾರೆ ಅನ್ನೋದು ಗೊತ್ತಿದೆ, ಎಂದು ರಾಜಕಾರಣಿಗಳಿಗೆ ಟಾಂಗ್ ನೀಡಿದ್ದಾರೆ.
   
ಸ್ವಾಮೀಜಿಗಳು ಉತ್ತರ ಕರ್ನಾಟಕದವರು, ಅವರಿಗೆ ತಮ್ಮ ಭಾವನೆ ವ್ಯಕ್ತಪಡಿಸುವ ಅಧಿಕಾರ ಇದೆ.   ಸ್ವಾಮಿಜಿಗಳಿಗೆ ವೇದನೆ ಹಾಗೂ ನೋವು ಆಗಿದೆ. ಪ್ರತ್ಯೇಕ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಿಲು ವೇದಿಕೆ ನಾನು ಸಿದ್ಧ ಮಾಡುವೆ, ಎಂದು ಅವರು ಹೇಳಿದ್ದಾರೆ.

ಶಾಸಕರು, ಸಂಸದರು, ಹೋರಾಟಗಾರು ಕೂಡಾ ಅದರಲ್ಲಿ ಭಾಗಿಯಾಗಲಿ.  ಧಾರವಾಡ, ಆಲಮಟ್ಟಿ, ಹುಬ್ಬಳ್ಳಿ ಅಥವಾ ಕುಲಬರ್ಗಿಯಲ್ಲಿ ಸಭೆ ಕರೆಯುತ್ತೇನೆ, ಎಂದು ಬಿದರಿ ಹೇಳಿದ್ದಾರೆ.
 

ಇದನ್ನೂ ಓದಿ: 

ನಾಳೆ ಬಂದ್ ಇರುತ್ತೋ..? ಇರುವುದಿಲ್ಲವೋ..?  

ಸಿಎಂ ವಿರುದ್ಧ ಸತೀಶ್ ಜಾರಕಿಹೊಳಿ ಗರಂ

click me!