ಜಯಲಲಿತಾ ಮಗನೆಂದು ಘೋಷಿಸುವಂತೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಅರ್ಜಿದಾರ

Published : Mar 27, 2017, 11:14 AM ISTUpdated : Apr 11, 2018, 12:48 PM IST
ಜಯಲಲಿತಾ ಮಗನೆಂದು ಘೋಷಿಸುವಂತೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಅರ್ಜಿದಾರ

ಸಾರಾಂಶ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಮತ್ತು ತೆಲುಗು ನಟ ಶೋಭನ್ ಬಾಬುರವರ ಪುತ್ರ ಎಂದು ನನ್ನನ್ನು ಘೋಷಿಸಿ ಎಂದು ವ್ಯಕ್ತಿಯೊಬ್ಬರು ಮದ್ರಾಸ್ ಹೈಕೋರ್ಟನ್ನು ಕೋರಿದ್ದಾರೆ. ಸದ್ಯಕ್ಕೆ ಬಂಧನದ ಬೀತಿ ಎದುರಿಸುತ್ತಿದ್ದಾರೆ. 

ಚೆನ್ನೈ (ಮಾ.27): ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಮತ್ತು ತೆಲುಗು ನಟ ಶೋಭನ್ ಬಾಬುರವರ ಪುತ್ರ ಎಂದು ನನ್ನನ್ನು ಘೋಷಿಸಿ ಎಂದು ವ್ಯಕ್ತಿಯೊಬ್ಬರು ಮದ್ರಾಸ್ ಹೈಕೋರ್ಟನ್ನು ಕೋರಿದ್ದಾರೆ. ಸದ್ಯಕ್ಕೆ ಬಂಧನದ ಬೀತಿ ಎದುರಿಸುತ್ತಿದ್ದಾರೆ. 

ಇದಕ್ಕೆ ಪೂರಕ ಎನ್ನುವಂತೆ ಜಯಲಲಿತಾ ಮತ್ತು ತೆಲುಗು ನಟ ಶೋಭನ್ ಬಾಬುರವರ ಸಹಿಯಿರುವ ವಿಲ್ ನ ಪ್ರತಿಯನ್ನು ಕೂಡಾ ಒದಗಿಸಿದ್ದಾರೆ. ಆದರೆ ನ್ಯಾಯಾಲಯ ಇದನ್ನು ತಿರಸ್ಕರಿಸಿದೆ. ನ್ಯಾ. ಆರ್.ಮಹದೇವನ್, ಅರ್ಜಿ ಸಲ್ಲಿಸಿದ ವ್ಯಕ್ತಿ ನ್ಯಾಯಾಲಯಕ್ಕೆ ಮೋಸ ಮಾಡುವುದರ ಜೊತೆಗೆ ನಕಲಿ ದಾಖಲೆಯನ್ನು  ತಯಾರಿಸಿದ್ದಾರೆ. ಅವರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ.

ಸಿಸಿಬಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ನೀಡಿದ್ದಾರೆ. ಅರ್ಜಿದಾರರು ಕೃಷ್ಣಮೂರ್ತಿ ಮತ್ತು ವಸಂತ ಮಣಿ ಎನ್ನುವ ದಂಪತಿಯ ಪುತ್ರ. ಸ್ಟಾಂಪ್ ಮಾರಾಟಗಾರ ಸುಬ್ರಮಣಿಯನ್ ಎನ್ನುವವರಿಂದ ಹಳೆಯ ಸ್ಟಾಂಪ್ ಪೇಪರ್ ಖರೀದಿಸಿ ಅದರಲ್ಲಿ ಕೋಮಲವಲ್ಲಿ ಅಲಿಯಾಸ್ ಜಯಲಲಿತಾ ಹೆಸರನ್ನು ಬರೆದಿದ್ದಾರೆ. ಗೌಪ್ಯ ಉದ್ದೇಶಕ್ಕಾಗಿ ಈ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಅದರ ವರದಿಯನ್ನು ಏಪ್ರಿಲ್ 10 ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸಿಸಿಬಿ ವರದಿಯಲ್ಲಿ ಹೇಳಿಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ