ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೆದುರೆ ಹಸ್ತಮೈಥುನ

Published : Jun 18, 2019, 07:29 PM ISTUpdated : Jun 18, 2019, 07:36 PM IST
ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೆದುರೆ ಹಸ್ತಮೈಥುನ

ಸಾರಾಂಶ

ಮುಂಬೈನಲ್ಲಿ ಪದೇ ಪದೇ ವರದಿಯಾಗುತ್ತಿದ್ದ ಸಾರ್ವಜನಿಕ ಸ್ಥಳದಲ್ಲೇ ಹಸ್ತಮೈಥುನ ಮಾಡಿಕೊಳ್ಳುವ ಸುದ್ದಿ ಈ ಸಾರಿ ದೆಹಲಿಯಿಂದ ವರದಿಯಾಗಿದೆ.

ನವದೆಹಲಿ[ಜೂ. 18] ನವದೆಹಲಿಯ ಹೂಡಾ ಸಿಟಿ ಸೆಂಟರ್ ಮೆಟ್ರೋ ಸ್ಟೇಶನ್ ನಲ್ಲಿ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡಿದ್ದಾನೆ. 29 ವರ್ಷದ ಇಂಟಿರಿಯರ್ ಡಿಸೈನರ್ ಒಬ್ಬರು ಆರೋಪ ಮಾಡಿದ್ದು ಅವರು ಎಕ್ಸಲರೇಟರ್ ನಿಂದ ಕೆಳಕ್ಕೆ ಇಳಿಯುತ್ತಿರುವಾಗ ದೃಶ್ಯ ಕಣ್ಣಿಗೆ ಬಿದ್ದಿದೆ ಎಂದು ಹೇಳಿದ್ದಾರೆ.

ಜೂನ್ 14 ರಂದು ಗುರುಗ್ರಾಮದಲ್ಲಿರುವ  ಸ್ನೇಹಿತರೊಬ್ಬರ ಮನೆಯಿಂದ ಹಿಂದಿರುಗುತ್ತಿದ್ದೆ. ಮೆಟ್ರೋ ನಿಲ್ದಾಣದ ಮೊದಲ ಮಹಡಿಯ ಬಟ್ಟೆ ಅಂಗಡಿಯಿಂದ ಹೊರಬಂದು ಎಕ್ಸಲರೇಟರ್ ಮೂಲಕ ಕೆಳಗಿಳಿಯುತ್ತಿದ್ದೆ. ಈ ವೇಳೆ ನನ್ನ ಹಿಂದೆ ನಿಂತ ವ್ಯಕ್ತಿ ಹಸ್ತಮೈಥುನ ಮಾಡಿಕೊಳ್ಳುತ್ತಿರುವುದು ಗೊತ್ತಾಗಿದೆ.

ಬೆಂಗಳೂರು: ಪಕ್ಕದ್ಮನೆ ಆಂಟಿಗೆ ಬೆತ್ತಲೆ ದೇಹ ತೋರಿಸಿ ಸೆಕ್ಸ್‌ಗೆ ಆಹ್ವಾನಿಸಿದ ಅಂಕಲ್

ನಾನು ಪ್ರಶ್ನೆ ಮಾಡಿದ್ದಕ್ಕೆ ಆತ ಕೆಲ ಅಶ್ಲೀಲ ಶಬ್ದಗಳಿಂದ ನನ್ನನ್ನೇ ನಿಂದಿಸಿದ್ದಾನೆ. ಪೊಲೀಸರಿಗೆ ಫೆಸ್ ಬುಕ್ ಮುಖಾಂತರ ಮಾಹಿತಿ ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಮೇಲೆ ಕ್ರಮ ತೆಗದುಕೊಳ್ಳಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಕಿಕ್ ಮಾಡಿದ ಚೆಂಡಿಗಾಗಿ ಕಿತ್ತಾಡಿದ ಅಭಿಮಾನಿಗಳು: ವೀಡಿಯೋ ಭಾರಿ ವೈರಲ್
ಕರ್ನಾಟಕಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆ 5 ಕೋಟಿ ಮಾನವ ದಿನ ಕಡಿತ; ಪ್ರಿಯಾಂಕ್ ಖರ್ಗೆ ಆರೋಪ