
ಬೆಳಗಾವಿ: ತಾನು ನೀಡಿದ್ದ 500 ಸಾಲ ತಿರುಗಿ ಕೊಡಲು ವಿಳಂಬ ಮಾಡಿದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಕದ್ದೊಯ್ದು ಮದುವೆಯಾದ ವಿಚಿತ್ರ ಘಟನೆ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗೋಕಾಕ್ ತಾಲೂಕಿನ ಮಿಡಕನಟ್ಟಿ ಗ್ರಾಮದ ರಮೇಶ್ ಹುಕ್ಕೇರಿ ಎಂಬಾತನೇ ತನ್ನ ಸ್ನೇಹಿತನ ಪತ್ನಿಯನ್ನು ಕರೆದೊಯ್ದು ಮದುವೆಯಾದವ.
ಬೈಲಹೊಂಗಲದ ಬಸವರಾಜ ಕೋನನ್ನ ವರ ಎಂಬಾತ ಪತ್ನಿಯನ್ನು ಕಳೆದುಕೊಂಡ ವ್ಯಕ್ತಿ. 2 ತಿಂಗಳ ಹಿಂದೆ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆ ದಿದೆ. 500 ಸಾಲಕ್ಕಾಗಿ ಪತ್ನಿ ಕಳೆದುಕೊಂಡ ಪತಿ, ನ್ಯಾಯ ಕೋರಿ ಡಿಸಿ ಕಚೇರಿ ಮೆಟ್ಟಿಲೇರಿದ್ದಾನೆ.
ಏನಿದು ಪ್ರಕರಣ?: ಮಿಡಕನಟ್ಟಿ ಗ್ರಾಮದ ರಮೇಶ್ ಹುಕ್ಕೇರಿ ಹಾಗೂ ಬೈಲಹೊಂಗಲ ತಾಲೂಕಿನ ಬಸವರಾಜ ಕೋನನ್ನವರ ಮತ್ತು ಈತನ ಪತ್ನಿ ಅನಿತಾ (ಹೆಸರು ಬದಲಿಸಲಾಗಿದೆ) ಬೆಳಗಾವಿ ನಗರದ ಒಂದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ರಮೇಶ್ ತನ್ನ ಸ್ನೇಹಿತ ಬಸವರಾಜನ ಪತ್ನಿಯೊಂದಿಗೂ ಸ್ನೇಹ ಬೆಳೆಸಿಕೊಂಡಿದ್ದಾನೆ.
ರಮೇಶ್ ಹತ್ತಿರ ಬಸವರಾಜು 500 ಸಾಲ ಪಡೆದಿದ್ದ. ಆದರೆ ಇದನ್ನು ಹಿಂದಿರುಗಿಸಲು ವಿಳಂಬವಾಗಿದೆ. ಇದೇ ಕಾರಣ ಇಟ್ಟುಕೊಂಡು ರಮೇಶ್ ತನ್ನ ಸ್ನೇಹಿತನ ಪತ್ನಿಯನ್ನು ಕರೆದೊಯ್ದು ಮದುವೆಯಾಗಿದ್ದಾನೆ. ತನ್ನ ಪತ್ನಿಗೆ ಇಲ್ಲಸಲ್ಲದ್ದನ್ನು ಹೇಳಿ ಆಕೆಯ ತಲೆ ಕೆಡಿಸಿ ಮದುವೆಯಾಗಿದ್ದಾನೆ ಎಂಬುದು ಬಸವರಾಜ ಆರೋಪ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.