2.75 ಲಕ್ಷ ಕೊಟ್ಟು BOSS ಖರೀದಿಸಿದ ನಲಪಾಡ್

Published : Sep 26, 2018, 09:25 AM IST
2.75 ಲಕ್ಷ ಕೊಟ್ಟು BOSS ಖರೀದಿಸಿದ ನಲಪಾಡ್

ಸಾರಾಂಶ

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್ ಬರೋಬ್ಬರಿ 2.75 ಲಕ್ಷ ಹಣವನ್ನು ಕೊಟ್ಟು ಫ್ಯಾನ್ಸಿ ನಂಬರ್ ಒಂದನ್ನು ಖರೀದಿ ಮಾಡಿದ್ದಾರೆ. 

ಬೆಂಗಳೂರು :  ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಬೆಂಗಳೂರು ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರಾರಂಭಿಸಿರುವ ಕೆಎ-03-ಎನ್‌ಇ’ ಶ್ರೇಣಿಯ ಮುಂಗಡ ನೋಂದಣಿ ಸಂಖ್ಯೆಗಳ (ಫ್ಯಾನ್ಸಿ ನಂಬರ್‌) ಬಹಿರಂಗ ಹರಾಜಿನಲ್ಲಿ ಇಂಗ್ಲಿಷ್‌ನ ‘Boss’ ಪದ ಹೋಲುವ 8055 ನೋಂದಣಿ ಸಂಖ್ಯೆ ಬರೋಬ್ಬರಿ 2.75 ಲಕ್ಷ ರು. ಹರಾಜಾಗಿದೆ. ವಿಶೇಷ ಎಂದರೆ, ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಅವರು ಹರಾಜಿನಲ್ಲಿ ಭಾಗವಹಿಸಿ ಈ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.

ಹರಾಜಿನಲ್ಲಿ ಒಟ್ಟು 23 ಫ್ಯಾನ್ಸಿ ನೋಂದಣಿ ಸಂಖ್ಯೆಗಳು ಹರಾಜಾಗಿವೆ. ಈ ಪೈಕಿ 0001 (.1.80 ಲಕ್ಷ), 7777 (.1.35 ಲಕ್ಷ), 0009 (.1.57 ಲಕ್ಷ), 0099 (.1 ಲಕ್ಷ), 6999 (.1 ಲಕ್ಷ) ಅಧಿಕ ಮೊತ್ತಕ್ಕೆ ಬಿಕರಿಯಾಗಿವೆ. 0005 (.86 ಸಾವಿರ), 0666 (.80 ಸಾವಿರ), 0555 ಹಾಗೂ 0999 ನೋಂದಣಿ ಸಂಖ್ಯೆ ತಲಾ .76 ಸಾವಿರ ಹರಾಜಾಗಿವೆ. ಉಳಿದಂತೆ 1234, 1111, 0333, 0045, 4545, 0007, 8888, 0909, 9999, 0003, 0018, 3339 ಹಾಗೂ 3333 ತಲಾ .75,500ಗೆ ಹರಾಜಾದವು. ಒಟ್ಟಾರೆ 23 ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಹರಾಜಿನಿಂದ ಸಾರಿಗೆ ಇಲಾಖೆಗೆ .22,46,500 ಆದಾಯ ಬಂದಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್
ಬೆಂಗಳೂರಿಗಾಗಿ ಶ್ರಮಿಸಿದೆವು ಆದ್ರೂ ತಮ್ಮನನ್ನು ಸೋಲಿಸಿದ್ರಿ: ಅಪಾರ್ಟ್‌ಮೆಂಟ್‌ ನಿವಾಸಿಗಳ ವಿರುದ್ಧ ಕಿಡಿಯಾದ ಡಿಕೆಶಿ