
ಪಾಟ್ನಾ(ಸೆ.26): ಮಕ್ಕಳಿಗೆ ಶೌಚ ಬಂದರೆ ಹಠ ಮಾಡ್ತಾರಲ್ಲಾ ಅದೇ ರೀತಿ ಈ ಭೂಪ ಕೂಡ ಶೌಚಕ್ಕೆ ಹೋಗಬೇಕೆಂದು ಹಠ ಮಾಡಿ ಮಾಡಬಾರದ ಯಡವಟ್ಟು ಮಾಡಿಕೊಂಡಿದ್ದಾನೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯ ಬಾಗಿಲು ತೆರೆಯುವ ಬದಲು ವಿಮಾನ ಆಗಸದಲ್ಲಿ ಹಾರುತ್ತಿದ್ದಾಗಲೇ ತುರ್ತು ನಿರ್ಗಮನ ದ್ವಾರ ತೆಗೆಯಲು ಪ್ರಯತ್ನಿಸಿದ ವಿಚಿತ್ರ ಘಟನೆ ಗೋ ಏರ್ ವಿಮಾನದಲ್ಲಿ ನಡೆದಿದೆ.
ದೆಹಲಿ-ಪಾಟ್ನಾ ನಡುವೆ ಸಂಚರಿಸುವ ಗೋ ಏರ್ ವಿಮಾನ ಜಿ 8 149 ನಲ್ಲಿ ಸೆಪ್ಟೆಂಬರ್ 22ರಂದು ಈ ಘಟನೆ ನಡೆದಿದ್ದು, ಶೌಚದ್ವಾರ ತೆರೆಯುವ ಬದಲು ನಿರ್ಗಮನ ದ್ವಾರ ತೆರದು ಸಹ ಪ್ರಯಣಿಕರ ಆತಂಕಕ್ಕೆ ಕಾರಣವಾಗಿದ್ದಾನೆ.
ಮಾನದಲ್ಲಿ ಒಟ್ಟು 150 ಪ್ರಯಾಣಿಕರಿದ್ದು ವ್ಯಕ್ತಿ ತಾನು ಶೌಚಾಲಯಕ್ಕೆ ತೆರಳಬೇಕೆಂದು ನಿರ್ಧರಿಸಿದ್ದು, ತಾನು ಶೌಚಾಲಯದ ಬಾಗಿಲು ತೆರೆಯುತ್ತಿದ್ದೇನೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಆತ ವಿಮಾನದ ತುರ್ತು ದ್ವಾರ ತೆರೆಯಲು ಯತ್ನಿಸಿದ್ದಾನೆ.
ವ್ಯಕ್ತಿಯ ಅಚಾತುರ್ಯ ಗಮನಿಸಿದ ಸಹ ಪ್ರಯಾಣಿಕರು ತಕ್ಷಣ ವಿಮಾನದ ಸಿಬ್ಬಂದಿಯನ್ನು ಕರೆದು ಎಚ್ಚರಿಸಿದ್ದಾರೆ. ಕೂಡಲೇ ವ್ಯಕ್ತಿಯನ್ನು ತುರ್ತು ನಿರ್ಗಮನ ದ್ವಾರ ತೆರೆಯುವದನ್ನು ತಡೆದಿದ್ದಾರೆ.
ಇನ್ನು ವಿಮಾನ ಪಾಟ್ನಾ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ವ್ಯಕ್ತಿಯನ್ನು ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣ್ಗೊಳಪಡಿಸಲಾಗಿದೆ. ರಾಜಸ್ಥಾನದ ಅಜ್ಮೀರ್ ನಲ್ಲಿನ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿರುವ ವ್ಯಕ್ತಿ, ತಾನು ತಪ್ಪಾಗಿ ತುರ್ತು ನಿರ್ಗಮನ ದ್ವಾರ ತೆರೆಯಲು ಮುಂದಾಗಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
ಇನ್ನು ವ್ಯಕ್ತಿ ಇದೇ ಪ್ರಥಮ ಬಾರಿಗೆ ವಿಮಾನಯಾನ ಕೈಗೊಂಡಿದ್ದ ಎನ್ನಲಾಗಿದ್ದು ವಿಚಾರಣೆ ಮುಗಿದ ಬಳಿಕ ಪಟ್ನಾದಲ್ಲಿನ ಕನ್ಕಾರ್‌ಬಾಗ್ ಪ್ರದೇಶದಲ್ಲಿ ನೆಲೆಸಿರುವ ಆತನ ಕುಟುಂಬದವರೊಡನೆ ತೆರಳಲು ಅವನಿಗೆ ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.