ರೈಲಲ್ಲಿ ವೆಜ್-ನಾನ್’ವೆಜ್ ಪ್ರಯಾಣಿಕರಿಗೆ ಪ್ರತ್ಯೇಕ ಸೀಟು..!

By Web DeskFirst Published Oct 2, 2018, 9:10 AM IST
Highlights

ರೈಲಿನಲ್ಲಿ ಪ್ರಯಾಣಿಕರ ಆದ್ಯತೆಗೆ ಅನುಗುಣವಾಗಿ ಸಸ್ಯಹಾರಿ ಹಾಗೂ ಮಾಂಸಹಾರಿಗಳಿಗೆ ಪ್ರತ್ಯೇಕ ಸೀಟು ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಂದಿನ ವಾರ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಅಹಮದಾಬಾದ್‌(ಅ.02): ರೈಲಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೆ ರೈಲು ಪ್ರಯಾಣದ ವೇಳೆ ಪ್ರತ್ಯೇಕ ಸೀಟು ನೀಡಬೇಕು ಎಂದು ಕೋರಿ ಗುಜರಾತ್‌ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 

ಭಾರತ ವಿವಿಧ ಸಂಸ್ಕೃತಿಯ ದೇಶ. ಇಲ್ಲಿ ಎಲ್ಲಾ ರೀತಿಯ ಆಹಾರ ಸಂಸ್ಕೃತಿಯ ಜನರಿದ್ದಾರೆ. ಹೀಗಾಗಿ ಪ್ರಯಾಣಿಕರ ಆದ್ಯತೆಗೆ ಅನುಗುಣವಾಗಿ ಸೀಟು ನೀಡಬೇಕು. ಮಾಂಸಾಹಾರ ತಿನ್ನುವವರಿಂದ ಸಸ್ಯಾಹಾರಿಗಳಿಗೆ ತೊಂದರೆ ಆಗಬಹುದು. ಹೀಗಾಗಿ ಆಹಾರ ಪದ್ಧತಿಗೆ ಅನುಗುಣವಾಗಿ ಸೀಟು ನೀಡಬೇಕು. ಟಿಕೆಟ್‌ ಬುಕ್‌ ಮಾಡುವಾಗಲೇ ಆಹಾರ ಕೂಡಾ ಬುಕ್‌ ಮಾಡಿರುವ ಕಾರಣ, ಹೀಗೆ ಮಾಡುವುದಕ್ಕೆ ತೊಂದರೆ ಆಗಲಾರದು ಎಂದು ಸ್ವತಃ ಸಸ್ಯಾಹಾರಿಯಾಗಿರುವ ಸೈಯದ್‌ ಎನ್ನುವವರು ಅರ್ಜಿಯಲ್ಲಿ ಕೋರಿದ್ದಾರೆ.

ರೈಲಿನಲ್ಲಿ ಪ್ರಯಾಣಿಕರ ಆದ್ಯತೆಗೆ ಅನುಗುಣವಾಗಿ ಸಸ್ಯಹಾರಿ ಹಾಗೂ ಮಾಂಸಹಾರಿಗಳಿಗೆ ಪ್ರತ್ಯೇಕ ಸೀಟು ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಂದಿನ ವಾರ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.

click me!