ಕಬಡ್ಡಿ ಸೋತಿದ್ದಕ್ಕೆ ‘ಕಿಕ್’ : ಕೊಪ್ಪಳದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನ ಮಗನ ಅಟ್ಟಹಾಸ

By Suvarna web DeskFirst Published Feb 8, 2018, 8:20 AM IST
Highlights

ಗಣೇಶ್ ಗಿಣಗೇರಿಯ ಮೊಬೈಲ್ ಅಂಗಡಿಗೆ ಹೋದಾಗ ಮಾರುತೆಪ್ಪ ಮಗ ವಿಜಯ್ ಆತನನ್ನು ಬೈಕ್ ಮೇಲೆ ಹೊತ್ತೊಯ್ದು ಜಮೀನೊಂದರಲ್ಲಿ ರಾಡ್'ನಿಂದ ಥಳಿಸಿದ್ದಾರಂತೆ. ಕೈ ಕಟ್ಟಿ ಹಾಕಿ ಕಬ್ಬಿಣದ ರಾಡ್'ನಿಂದ ಥಳಿಸಿದ ಪರಿಣಾಮ ಗಣೇಶ ಎರಡು ಕೈಗಳು ಮುರಿದು ಹೋಗಿವೆ.

ಕೊಪ್ಪಳ(ಫೆ.08): ಹಳೆ ದ್ವೇಷದ ಹಿನ್ನಲೆಯಲ್ಲಿ ಮಾಜಿ ಜಿಪಂ ಸದಸ್ಯನ ಮಗ ಆತನ ಗ್ಯಾಂಗ್ ಯುವಕನೋರ್ವನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ತಾಲೂಕಿನ ಗಿಣಗೇರಿ ಗ್ರಾಮದ ಮಾಜಿ ಜಿಪಂ ಸದಸ್ಯ ಮಾರುತೆಪ್ಪ ಹಲಗೇರಿ ಮಗ ವಿಜಯ್ ಆತನ ಸ್ನೇಹಿತರಾದ ಶಿವು ಪರುಶುರಾಮ್ ಸೇರಿದಂತೆ 15 ಜನರ ತಂಡ ಹಿಗ್ಗಾಮುಗ್ಗ ಥಳಿಸಿದ ಆರೋಪ ಕೇಳಿ ಬಂದಿದೆ. ಕೊಪ್ಪಳ ತಾಲೂಕಿನ ಕನಕಾಪೂರ ಗ್ರಾಮದ ಗಣೇಶ್ ಎಂಬ ಯುವಕನನ್ನು ಮೂರು ಗಂಟೆಗಳ ಕಾಲ ಕಟ್ಟಿ ಹಾಕಿ ಥಳಿಸಿದ್ದಾರಂತೆ. ಗಣೇಶ್ ಗಿಣಗೇರಿಯ ಮೊಬೈಲ್ ಅಂಗಡಿಗೆ ಹೋದಾಗ ಮಾರುತೆಪ್ಪ ಮಗ ವಿಜಯ್ ಆತನನ್ನು ಬೈಕ್ ಮೇಲೆ ಹೊತ್ತೊಯ್ದು ಜಮೀನೊಂದರಲ್ಲಿ ರಾಡ್'ನಿಂದ ಥಳಿಸಿದ್ದಾರಂತೆ. ಕೈ ಕಟ್ಟಿ ಹಾಕಿ ಕಬ್ಬಿಣದ ರಾಡ್'ನಿಂದ ಥಳಿಸಿದ ಪರಿಣಾಮ ಗಣೇಶ ಎರಡು ಕೈಗಳು ಮುರಿದು ಹೋಗಿವೆ.

ಈ ಘಟನೆಗೆ ಹಳೆ ದ್ವೇಷವೇ ಕಾರಣವಾಗಿದ್ದು,ಕಳೆದ ಎಂಟು ತಿಂಗಳ ಹಿಂದೆ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ನಡೆದ ಗಲಾಟೆ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಮೂರು ಗಂಟೆಗಳ ಕಾಲ ದರ್ಪ ಮಾಡಿದ ಖದೀಮರು ತದನಂತರ ಗಣೇಶನನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ವಿಷಯ ತಿಳಿಯಿತ್ತಿದದ್ದಂಯೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬಂದ ಗಣೇಶ್ ಸಂಬಂಧಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ಮಾಡಿದರು. ಆಸ್ಪತ್ರೆಯ ಮುಂದೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

click me!