ಮೋದಿ ಪತ್ನಿಯನ್ನು ಭೇಟಿಯಾದ ದೀದಿ, ಕೊಟ್ಟೇ ಬಿಟ್ರು ವಿಶೇಷ ಗಿಫ್ಟ್!

By Precilla Olivia Dias  |  First Published Sep 18, 2019, 12:37 PM IST

ಜಶೋದಾಬೇನ್, ಮಮತಾ ಬ್ಯಾನರ್ಜಿ ಆಕಸ್ಮಿಕ ಭೇಟಿ| ಮೋದಿ ಪತ್ನಿಯೊಂದಿಗೆ ನಗುಮೊಗದಿಂದಲೇ ಮಾತನಾಡಿದ ದೀದಿ| ವಿಮಾನ ನಿಲ್ದಾಣದಲ್ಲಿ ಬೇಟಿಯಾದ ಜಶೋದಾಬೇನ್‌ಗೆ ಸೀರೆ ಗಿಫ್ಟ್‌ ಕೊಟ್ಟ ದೀದಿ


ಕೋಲ್ಕತ್ತಾ[ಸೆ.18]: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾರ್ಯಕ್ರಮ ನಿಮಿತ್ತ ರಾಜ್ಯಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ ಪತ್ನಿ ಜಶೋದಾಬೇನ್ ರನ್ನು ಮಂಗಳವಾರ, ಸೆಪ್ಟೆಂಬರ್ 17ರಂದು ಭೇಟಿಯಾಗಿದ್ದಾರೆ. 

ಹೌದು ಸೋಮವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಜಶೋದಾಬೇನ್, ಬಳಿಕ ಮೋದಿಗಾಗಿ ಇಲ್ಲಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಬಿಜೆಪಿ ನಾಯಕರು ಯಾರೂ ಅವರನ್ನು ಭೇಟಿಯಾಗದಿದ್ದರೂ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ವಾಗತಿಸಿ ಭದ್ರತೆ ಒದಗಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ದೆಹಲಿಗೆ ಹೊರಟಿದ್ದ ಜಶೋದಾಬೇನ್ ರನ್ನು ದೀದಿ ವಿಮಾನ ನಿಲ್ದಾಣಕ್ಕೆ ತೆರಳಿ ಭೇಟಿಯಾಗಿದ್ದಾರೆ. 

Tap to resize

Latest Videos

undefined

#HappyBdayPMModi| ಮೋದಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ಜಶೋದಾ ಬೇನ್‌!

ಆಕಸ್ಮಿಕ ಭೇಟಿ

ಎರಡು ದಿನಗಳ ಪಶ್ಚಿಮ ಬಂಗಾಳ ಭೇಟಿ ಮುಗಿಸಿದ್ದ ಜಶೋದಾಬೇನ್ ದೆಹಲಿಗೆ ಮರಳಲು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಬುಧವಾರದಂದು ಪಿಎಂ ಮೋದಿ ಜೊತೆಗೆ ನಿಗಧಿಯಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ದೀದಿ ಕೂಡಾ ದೆಹಲಿಗೆ ಹೊರಟಿದ್ದರು. ಈ ವೇಳೆ ಆಕಸ್ಮಿಕವಾಗಿ ಜಶೋದಾಬೇನ್ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಭೇಟಿಯಾಗಿದ್ದಾರೆ. ನಗು ಮೊಗದಿಂದಲೇ ಜಶೋದಾಬೇನ್ ಜೊತೆ ಮಾತನಾಡಿದ ದೀದಿ, ಸೀರೆಯೊಂದನ್ನೂ ಕೊಡುಗೆಯಾಗಿ ನೀಡಿದ್ದಾರೆ. 

ಮೋದಿ ಹವಾ: ವಿದೇಶಿ ನಾಯಕನ ರ‍್ಯಾಲಿಗೆ ‘ದೊಡ್ಡಣ್ಣ’ ಬರುತ್ತಿರೋದು ಇದೇ ಮೊದಲು!

ಸದ್ಯ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಜಶೋದಾಬೇನ್ ಪರಸ್ಪರ ಮಾತನಾಡುತ್ತಿರುವ ಫೋಟೋಗಲು ಸಾಮಾಜಿಕ ಜಾಲತಾಣಗಳ್ಲಲಿ ವೈರಲ್ ಆಗಿವೆ.

click me!