
ಉಡುಪಿ, (ಮಾ. 2): ಮುಂದಿನ ಟಾರ್ಗೆಟ್ ಮಲ್ಪೆ ಬೀಚ್, ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂದಿನ ಟಾರ್ಗೆಟ್ ಮಲ್ಪೆ ಬೀಚ್, ಪಾಕಿಸ್ತಾನ್ ಜಿಂದಾಬಾದ್ ಎನ್ನುವ ವಿಡಿಯೋ ಒಂದು ಉಡುಪಿ ಜಿಲ್ಲೆಯಾದ್ಯಂತ ವೈರಲ್ ಆಗಿತ್ತು. ಈ ವಿಡಿಯೋ ಬೆನ್ನತ್ತಿದ ಪೊಲೀಸರು (ಇಂದು) ಶನಿವಾರ ತೊಟ್ಟಂನ ಸೃಜನ್ (18) ಎಂಬ ಯುವಕನನ್ನು ಬಂಧಿಸಿದ್ದಾರೆ.
ಮುಂದಿನ ಟಾರ್ಗೆಟ್ ಮಲ್ಪೆ ಬೀಚ್, ಪಾಕಿಸ್ತಾನ್ ಜಿಂದಾಬಾದ್, ವಿಡಿಯೋ ವೈರಲ್
ತಾನೆ ವಿಡಿಯೋ ಮಾಡಿ, ಮೊಬೈಲ್‌ಗೆ ಅಪ್‌ಲೋಡ್ ಮಾಡಿದ್ದಾಗಿ ಯುವಕ ಒಪ್ಪಿಕೊಂಡಿದ್ದು, ಮನೆಯಲ್ಲಿ ನನಗೆ ಯಾವಾಗಲು ಬೈಯುತ್ತಿರುತ್ತಾರೆ ಅದಕ್ಕೆ ಈಗ ಮಾಡಿದ್ದೇನೆ ಎಂದು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ಪಾಕಿಸ್ತಾನಿ ಜಿಂದಬಾದ್ ಎನ್ನುತ್ತಾ ಭಾರತೀಯರನ್ನು ಅವಾಚ್ಯವಾಗಿ ನಿಂದಿಸುವ ಯುವಕ, ನಮ್ಮ ಮುಂದಿನ ಗುರಿ ಮಲ್ಪೆ ಎಂದು ಹೇಳಿದ್ದಾನೆ.
ಮಲ್ಪೆ ಬೀಚ್‌ಗೆ ಬಾಂಬ್ ಹಾಕಲಾಗುವುದು. ಅಂಗಡಿಗಳೆಲ್ಲ ನಾಶವಾಗುತ್ತದೆ ನೋಡುತ್ತಿರಿ ಎಂದು ಯುವಕ ಮುಖಕ್ಕೆ ಬಟ್ಟೆ ಸುತ್ತಿಕೊಂಡು ವಿಡಿಯೋದಲ್ಲಿ ಹೇಳಿಕೆ ನೀಡಿದ್ದ.
ಯುವಕನ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ಸಾರ್ವಜನಿಕರ ಮಾಹಿತಿ ಮೇರೆಗೆ ಉಡುಪಿ ಎಸ್‌ಪಿ ನಿಶಾ ಜೇಮ್ಸ್ ತುರ್ತು ವಿಶೇಷ ತಂಡ ರಚಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.