'ಯುದ್ಧ ಮಾಡೀವಿ, 22 ಸೀಟು ಗೆಲ್ತೀವಿ ಅಂತೀರಾ ಬಾಡಿ ಎಲ್ಲಿ'..? BSYಗೆ ಕ್ಲಾಸ್

By Web DeskFirst Published Mar 2, 2019, 3:17 PM IST
Highlights

ಮೊನ್ನೆ ಇಂಡಿಯನ್ ಏರ್​ಫೋರ್ಸ್​ ಉಗ್ರರ ಕ್ಯಾಂಪ್​ ಮೇಲೆ ಏರ್​​ಸ್ಟ್ರೈಕ್ ನಡೆಸಿ 300ಕ್ಕೂ ಹೆಚ್ಚು ಉಗ್ರರನ್ನ ಉಡಾಯಿಸಿದೆ. ವಾಯು ಸೇನೆಯ ಮಹಾ ಕಾರ್ಯವನ್ನ ಇಡೀ ದೇಶವೇ ಕೊಂಡಾಡುತ್ತಿದೆ. ಆದ್ರೆ, ಕೆಲವರು ತಮ್ಮ ರಾಜಕೀಯ ಚಪಲಕ್ಕೆ ಸಾಕ್ಷಿ ಕೇಳುತ್ತಿರುವುದು ವಿಪರ್ಯಾಸ.

ಕೊಪ್ಪಳ, (ಮಾ.2): ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಏರ್ ಸ್ಟ್ರೆಕ್ ಮಾಡಿ ಸೇಡು ತೀರಿಸಿಕೊಂಡಿದ್ದು, ಸೇನೆಯ ಕಾರ್ಯಕ್ಕೆ ಅಭಿನಂದನೆಗಳ ಮಹಾಪರವೇ ಹರಿದುಬಂದಿದೆ. 

ಆದ್ರೆ, ಕೆಲವರು ‘ಮೊಸರಲ್ಲಿ ಕಲ್ಲು ಹುಡುಕುವ’ ಹುಡುಕುವ ಹಾಗೆ ದಾಳಿಗೆ ಸಾಕ್ಷಿ ಕೇಳುತ್ತಿದ್ದಾರೆ. ಇದೀಗ ಕೊಪ್ಪಳದ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿಕೊಂಡಿದ್ದು ಬಿ.ಎಸ್‌.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುವ ನೆಪದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು.

#AirStrike ನಿಂದ ಬಿಜೆಪಿಗೆ 22 ಸೀಟು ಖಚಿತ: ಯಡಿಯೂರಪ್ಪಗೆ ಛೀಮಾರಿ

ಕೊಪ್ಪಳದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಹಾಗೂ ಸಂಸದೀಯ ಕಾರ್ಯದರ್ಶಿ ರಾಘವೇಂದ್ರ ಹಿಟ್ನಾಳ್, 12 ನಿಮಿಷದಲ್ಲಿ ಯುದ್ದ ಆಗಿದೆ ಅಂತಾರೆ ಬಾಡಿ ಎಲ್ಲಿ..?  ಎಂದು ಪ್ರಶ್ನೆ ಮಾಡಿದ್ದಾರೆ. 

ಯಡಿಯೂರಪ್ಪ 22 ಸೀಟ್ ಗೆಲ್ತೀನಿ ಅಂದಿರೋದು ದುರಂತ. ಇದಕ್ಕಿಂತ ದೊಡ್ಡ ದುರಂತ ಇಲ್ಲ ಎಂದ ರಾಘವೇಂದ್ರ ಹಿಟ್ನಾಳ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.

ಸೈನಿಕ ಕುಟುಂಬ ಸಂಕಷ್ಟದಲ್ಲಿವೆ. ಆದ್ರೆ ಅವರ ಮೇಲೆ ರಾಜಕೀಯ ಮಾಡೋದು ನಾಚಿಕೆಗೇಡಿತನ. ಕೋಮು ಗಲಭೆ ಮಾಡಸೋದು ಬಿಜೆಪಿಯ ಕೆಲಸವೆಂದ ಆಕ್ರೋಶ ವ್ಯಕ್ತಪಡಿಸಿದರು.

click me!