ಮಲ್ಪೆ ದೋಣಿ ನಾಪತ್ತೆ : ಕಣ್ಮರೆ ರಹಸ್ಯ ನಿಗೂಢ

By Web DeskFirst Published May 4, 2019, 9:32 AM IST
Highlights

ನಾಪತ್ತೆಯಾದ ಮಲ್ಪೆ ಮೀನುಗಾರರ ದೋಣಿ ಪ್ರಕರಣದ ರಹಸ್ಯ ರಹಸ್ಯವಾಗಿಯೇ ಉಳಿದಿದೆ. 

ಉಡುಪಿ: ನಾಲ್ಕೂವರೆ ತಿಂಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಮಲ್ಪೆಯ ಸುವರ್ಣ ತ್ರಿಭುಜ ಬೋಟ್‌ನ ಸುತ್ತ ಸುತ್ತಿಕೊಂಡಿದ್ದ ಊಹಾಪೋಹಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಬೋಟ್‌ನ ಅವಶೇಷ ಮಹಾರಾಷ್ಟ್ರದ ಮಾಳ್ವಾನ್ ಸಮೀಪ ಕಡಲಲ್ಲಿ ಪತ್ತೆಯಾಗಿದೆ ಎಂದು ನೌಕಾ ಪಡೆಯೇ ಘೋಷಿಸಿದೆ. 

ಆದರೆ, ಈ ಬೋಟ್ ಮುಳುಗಿದ್ದು ಹೇಗೆ ಎನ್ನುವ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ. ಡಿ. 15ರಂದು ಮಲ್ಪೆ ಬಂದರಿನಿಂದ ತೆರಳಿದ್ದ ಮೀನುಗಾರಿಕಾ ಬೋಟು ನಿಗೂಢವಾಗಿ ಕಣ್ಮರೆಯಾಗಿತ್ತು. ಈ ಬೋಟಿನ ಹುಡುಕಾಟ ನಡೆಸುತ್ತಿದ್ದ ನೌಕಾಪಡೆ ಮಹಾರಾಷ್ಟ್ರದ ಮಾಳ್ವಾನ್
ಜಿಲ್ಲೆಯ ಸಮುದ್ರ ತೀರದಲ್ಲಿ ಮುಳುಗಿದೆ ಎಂಬುದನ್ನು ಗುರುವಾರ ರಾತ್ರಿ ಅಧಿಕೃತವಾಗಿ ಘೋಷಿಸಿತ್ತು. 

ಆದರೆ ಅದರಲ್ಲಿದ್ದ 7 ಮೀನುಗಾರರು ಏನಾದರು ಎಂಬುದನ್ನು ನೌಕಾಪಡೆ ಖಚಿತವಾಗಿ ಹೇಳಿರಲಿಲ್ಲ. ನೌಕಾಪಡೆ ಯೊಂದಿಗೆ ಹುಡುಕಾಟ ನಡೆಸಿದ ಮೀನುಗಾರರ ಮತ್ತು ತಜ್ಞರ ತಂಡ ಸಮುದ್ರ ದಾಳದಲ್ಲಿ ಪತ್ತೆಯಾದ ಬೋಟಿನ ಭಗ್ನಾವಶೇಷಗಳನ್ನು ನೋಡಿದಾಗ ಅದರಲ್ಲಿದ್ದ ಮೀನುಗಾರರು ಬದುಕುಳಿದಿರುವ ಸಾಧ್ಯತೆಗಳೇ ಇಲ್ಲ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದೆ.

click me!