ಗಂಟೆಗೆ 15 ಸಾವಿರ ನುಂಗುವ ಮಲ್ಯರ ವಿಮಾನ ಮುಂಬೈನಲ್ಲಿದೆ!

By Web DeskFirst Published Jun 15, 2018, 4:34 PM IST
Highlights

ಸಾಕಷ್ಟು ಸಾಲ ಮಾಡಿ ವಿದೇಶಕ್ಕೆ ತೆರಳಿರುವ ಮಲ್ಯ ಇಂದಿಗೂ ನಷ್ಟದ ದೊರೆಯಾಗಿಯೇ ಇದ್ದಾರೆ. ಆನೆ ಇದ್ದರೂ ಕೋಟಿ ಸತ್ತರೂ ಕೋಟಿ ಎಂಬ ಗಾದೆ ಮಾತಿರುವಂತೆ ವಿಜಯ್ ಮಲ್ಯ ಇಲ್ಲಿ ಇದ್ದರೂ ನಷ್ಟ ಇಲ್ಲವಾದರೂ ನಷ್ಟ ಎಂದು ಸೇರಿಸಿಕೊಳ್ಳಬಹುದಾಗಿದೆ. ಹಾಗಾದರೆ  ಅಂಥ ನಷ್ಟವಾಗುವ ಕೆಲಸ ಮಲ್ಯ ಮತ್ತೆ ಮಾಡಿರುವುದೇನು? ವಿವರಕ್ಕೆ ಮುಂದೆ ಓದಿ....

ಮುಂಬೈ ಜೂನ್ 15:  ಸದ್ಯ ಲಂಡನ್ ನಲ್ಲಿ ಹಾಯಾಗಿರುವ ಒಂದು ಕಾಲದ ಮದ್ಯದ ದೊರೆ ವಿಜಯ್‌ ಮಲ್ಯ ಅವರ ನೆಚ್ಚಿನ ಐಷಾರಾಮಿ ವಿಮಾನವನ್ನು 2013ರಿಂದ ಮುಂಬಯಿ ಛ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್‌ ಮಾಡಲಾಗಿದ್ದು 5 ವರ್ಷಗಳಲ್ಲಿ ವಿಮಾನ ನಿಲ್ದಾಣಕ್ಕೆ ಬರೋಬ್ಬರಿ 10 ಕೋಟಿ ರೂ. ನಷ್ಟ ಮಾಡಿದೆ! ಅಂದರೆ ಗಂಟೆಗೆ 15 ಸಾವಿರ ರೂ.! ಅಂದರೆ ಬೃಹತ್ ಗಾತ್ರದ ವಿಮಾನದ ಪಾರ್ಕಿಂಗ್ ವೆಚ್ಚವನ್ನು ವಿಮಾನ ನಿಲ್ದಾಣವೇ ಅನಿವಾರ್ಯವಾಗಿ ಭರಿಸಿಕೊಳ್ಳಬೇಕಾಗಿದೆ.

ವಿವಿಧ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ನಾಪತ್ತೆಯಾಗಿರುವ ಮಲ್ಯರಿಗೆ ಸಂಬಂಧಿಸಿದ ಆಸ್ತಿಗಳನ್ನು ಹರಾಜು ಹಾಕಲಾಗಿದೆ. ಆದರೂ ಸಹ ಸಾಲದ ಅರ್ಧದಷ್ಟು ಹಣ ಸಂದಾಯವಾಗಿಲ್ಲ.

ನೀರವ್‌ ಮೋದಿ,, ಮಲ್ಯ ಗಡಿಪಾರಿಗೆ ಬ್ರಿಟನ್‌ ಸಜ್ಜು?

ವಿಮಾನದ ಕಂಡಿಷನ್ ಹೇಗಿದೆ: ವರ್ಷಗಳಿಂದ ಒಂದೇ ಕಡೆ ನಿಂತಿರುವ ಈ ವಿಮಾನವು ಈಗ ಹಾರಾಟಕ್ಕೆ ಯೋಗ್ಯವಾಗಿಲ್ಲ. ಗುಜರಿಗೆ ಹಾಕಿದರೆ 10 ಟನ್‌ ತೂಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸೇವಾ ತೆರಿಗೆ ಇಲಾಖೆಗೆ ಮಲ್ಯ 1,000 ಕೋಟಿ ರೂ. ಬಾಕಿಯನ್ನು ಉಳಿಸಿಕೊಂಡಿದ್ಡಿದರು ಅದಕ್ಕೆ ಸಂಬಂಧಿಸಿ ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ವಿಮಾನವನ್ನು ಮುಟ್ಟುಗೋಲು ಹಾಕಿಕೊಂಡು ವಿಮಾನ ನಿಲ್ದಾಣಕ್ಕೆ ತಂದು ನಿಲ್ಲಿಸಲಾಗಿತ್ತು.

ಹೈಕೋರ್ಟ್ ಸಹ ವಿಮಾನ ತೆರವಿಗೆ ಆದೇಶ ನೀಡಿದ್ದರೂ ಜಾರಿಯಾಗಿಲ್ಲ. ಒಟ್ಟಿನಲ್ಲಿ ಸಾಲ ಮರುಪಾವತಿಗೆಂದು ಮುಟ್ಟುಗೋಲು ಹಾಕಿಕೊಂಡು ಬಂದ ಐಷರಾಮಿ ವಿಮಾನವನ್ನು ಅತ್ತ ಯಾರೂ ಖರೀದಿಗೂ ಮುಂದಾಗುತ್ತಿಲ್ಲ. ಅಧಿಕಾರಿಗಳು ವಿಮಾನವನ್ನು ಮತ್ತೊಮ್ಮೆ ಹರಾಜು ಹಾಕುವ ಕುರಿತಾಗಿಯೂ ಯೋಚನೆ ಮಾಡುತ್ತಿದ್ದಾರೆ. 

click me!