ಇಂದು ಶಬರಿಮಲೆಯಲ್ಲಿ ಮಕರವಿಳಕ್ಕು ಉತ್ಸವ

By Suvarna Web DeskFirst Published Jan 14, 2018, 10:06 AM IST
Highlights

ಕೇರಳದ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಕರವಿಳಕ್ಕು ಉತ್ಸವ ಇಂದು ಸಂಭವಿಸಲಿದೆ. ಈ ಮಹಾ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತದಿಂದ ಈಗಾಗಲೇ ಲಕ್ಷಾಂತರ ಅಯ್ಯಪ್ಪ ಭಕ್ತರು ಶಬರಿಮಲೆಗೆ ಧಾವಿಸಿದ್ದಾರೆ.

ಇಡುಕ್ಕಿ: ಕೇರಳದ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಕರವಿಳಕ್ಕು ಉತ್ಸವ ಇಂದು ಸಂಭವಿಸಲಿದೆ. ಈ ಮಹಾ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತದಿಂದ ಈಗಾಗಲೇ ಲಕ್ಷಾಂತರ ಅಯ್ಯಪ್ಪ ಭಕ್ತರು ಶಬರಿಮಲೆಗೆ ಧಾವಿಸಿದ್ದಾರೆ. ಲಕ್ಷಾಂತರ ಜನರ ಭಾಗವಹಿಸುವಿಕೆಯಿಂದ ನಡೆಯುವ ವಾರ್ಷಿಕ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಬೇಕಾದ ಎಲ್ಲ ಕ್ರಮಗಳನ್ನು ಕೇರಳ ಸರ್ಕಾರ ಈಗಾಗಲೇ ಕೈಗೊಂಡಿದೆ.

ಎರ್ನಾಕುಲಂ ವಲಯ ಐಜಿ, ಇಡುಕ್ಕಿ ಎಸ್‌ಪಿ ಮತ್ತು ಡಿವೈಎಸ್‌ಪಿಗಳು ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದು, ಜಿಲ್ಲಾಡಳಿತವೂ ಎಲ್ಲ ಸಹಕಾರ ನೀಡುತ್ತಿದೆ. ಪ್ರತಿ ವರ್ಷ ಮಕರ ಸಂಕ್ರಮಣದ ದಿನ ಶಬರಿಮಲೆ ಅಯ್ಯಪ್ಪ ಸನ್ನಿದಾನದಲ್ಲಿ ಮಕರ ಜ್ಯೋತಿ ಸಂಭವಿಸುತ್ತಿದ್ದು, ಅಪಾರ ಸಂಖ್ಯೆಯ ಭಕ್ತರು ಇದನ್ನು ವೀಕ್ಷಿಸುವುದಕ್ಕಾಗಿಯೇ ತಿಂಗಳುಗಟ್ಟಲೆ ಶ್ರದ್ಧಾಭಕ್ತಿಯ ವ್ರತ ಮಾಡಿ, ದೇವಳಕ್ಕೆ ಭೇಟಿ ನೀಡುತ್ತಾರೆ.

click me!