ಪಠ್ಯದಲ್ಲಿ ಝಾಕಿರ್ ನಾಯ್ಕ್ ಹೊಗಳಿಕೆ : ಶಾಲೆಗೆ ನೋಟಿಸ್

By Suvarna Web DeskFirst Published Jan 14, 2018, 9:28 AM IST
Highlights

ಶಾಲೆಯೊಂದರ ಪಠ್ಯ ಪುಸ್ತಕದಲ್ಲಿ ವಿವಾದಿತ ಇಸ್ಲಾಮಿಕ್ ಧರ್ಮ ಬೋಧಕ ಝಾಕೀರ್ ನಾಯ್ಕ್‌ನನ್ನು ‘ಪ್ರಮುಖ ಇಸ್ಲಾಮಿಕ್ ವ್ಯಕ್ತಿತ್ವ’ ಎಂದು ಬಿಂಬಿಸಿರುವುದು ಬೆಳಕಿಗೆ ಬಂದಿದೆ.

ಲಖನೌ: ಶಾಲೆಯೊಂದರ ಪಠ್ಯ ಪುಸ್ತಕದಲ್ಲಿ ವಿವಾದಿತ ಇಸ್ಲಾಮಿಕ್ ಧರ್ಮ ಬೋಧಕ ಝಾಕೀರ್ ನಾಯ್ಕ್‌ನನ್ನು ‘ಪ್ರಮುಖ ಇಸ್ಲಾಮಿಕ್ ವ್ಯಕ್ತಿತ್ವ’ ಎಂದು ಬಿಂಬಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಆಲಿಗಢದ ಶಾಲೆಯೊಂದಕ್ಕೆ ಶಿಕ್ಷಣ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

ತನಿಖಾ ಸಮಿತಿಗೆ ವರದಿ ನೀಡಲು ಒಂದು ವಾರ ನೀಡಲಾಗಿದೆ ಎಂದು ಆಲಿಗಢ ಪ್ರಾಥಮಿಕ ಶಿಕ್ಷಣಾಧಿಕಾರಿ ಧೀರೇಂದ್ರ ಕುಮಾರ್ ತಿಳಿಸಿದ್ದಾರೆ. ಆದರೆ ಅದು 2015ರಲ್ಲಿ ಪ್ರಕಟವಾದ  ಪುಸ್ತಕ, ಹಳೆಯ ಆವೃತ್ತಿ ಈಗ ಬದಲಾವಣೆ ಆಗಿದೆ ಎಂದು ಶಾಲೆಯ ಮ್ಯಾನೇಜರ್ ಕೌನೇನ್ ಕೌಸರ್ ತಿಳಿಸಿದ್ದಾರೆ.

click me!