ಹಲವರಿಗೆ ಶಾಕ್-ಕೆಲವರಿಗೆ ಕೋಕ್..ಕೆಪಿಸಿಸಿಯಲ್ಲಿ ಮೇಜರ್ ಸರ್ಜರಿ

Published : Jul 26, 2018, 02:10 PM ISTUpdated : Jul 26, 2018, 02:17 PM IST
ಹಲವರಿಗೆ ಶಾಕ್-ಕೆಲವರಿಗೆ ಕೋಕ್..ಕೆಪಿಸಿಸಿಯಲ್ಲಿ ಮೇಜರ್ ಸರ್ಜರಿ

ಸಾರಾಂಶ

ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ಮೇಲೆ ದಿನೇಶ್ ಗುಂಡೂರಾವ್ ಮಹತ್ವದ ಸರ್ಜರಿಗೆ ಮುಂದಾಗಿದ್ದಾರೆ. ಪದಾಧಿಕಾರಿಗಳ ಪಟ್ಟಿ, ಪಕ್ಷ ವಿರೋಧಿ ಚಟುವಟಿಕೆ ಎಲ್ಲದಕ್ಕೂ ಒಂದು ಸೂಕ್ತ ನಿಯಮಾವಳಿ ಸಿದ್ಧಪಡಿಸಲು ಮುಂದಾಗಿದ್ದಾರೆ.

ಬೆಂಗಳೂರು[ಜು.26]  ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆಗೆ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿರುವ ಗುಂಡೂರಾವ್ ಪದಾಧಿಕಾರಿಗಳ ಸಂಖ್ಯೆ ಕಡಿಮೆಗೊಳಿಸಲು ವರದಿ ಸಿದ್ಧಪಡಿಸುತ್ತಿದ್ದಾರೆ.

300ರಷ್ಟಿರುವ ಕೆಪಿಸಿಸಿ ಪದಾಧಿಕಾರಿಗಳ ಸಂಖ್ಯೆಯನ್ನು 150 ಕ್ಕೆ ಇಳಿಸಲು ಗುಂಡೂರಾವ್ರಾ ಚಿಂತನೆ ನಡೆಸಿದ್ದಾರೆ. 300 ಪದಾಧಿಕಾರಿಗಳಲ್ಲಿ ಕೆಲಸ ಮಾಡದವರ ಬದಲಾವಣೆ ಖಚಿತವಾಗಿದ್ದು ಇಂಥವರಿಗೆ ಪದಾಧಿಕಾರಿಗಳಿಗೆ ಕೆಪಿಸಿಸಿಯಿಂದ ಗೇಟ್ ಪಾಸ್ ನೀಡಲಿದ್ದಾರೆ. ಜತೆಗೆ ಎರಡು ಹುದ್ದೆ ಹೊಂದಿದವರನ್ನು ಒಂದೆ ಹುದ್ದೆಗೆ ಸೀಮಿತ ಮಾಡಲಿದ್ದಾರೆ.

ಪರಂ ಬಣದಿಂದ ಸಿದ್ದರಾಮಯ್ಯಗೆ ಹುದ್ದೆ ತಪ್ಪಿಸಲು ಪ್ಲಾನ್..?

ಪದಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ನಿಂದ ವರದಿ ಕೇಳಿರುವ ಗುಂಡೂರಾವ್ ಆಗಸ್ಟ್ 12 ರೊಳಗೆ ವರದಿ ನೀಡುವಂತೆ ತಿಳಿಸಿದ್ದಾರೆ. ವರದಿ ಅನ್ವಯ ಪದಾಧಿಕಾರಿಗಳ ಕಾರ್ಯಸಾಧನೆ ಗಮನಿಸಿ ಪದಾಧಿಕಾರಿಗಳ ಬದಲಾವಣೆ ಮಾಡಲಿದ್ದಾರೆ.

ಸಿದ್ದುಗೆ ಚುನಾವಣೆ ಎಂದರೆ ಅಲರ್ಜಿಯಾಗುತ್ತಿದೆಯಂತೆ

ಕೆಪಿಸಿಸಿಗೆ ಪದಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಇಲ್ಲ.
ಇನ್ನು ಮುಮದೆ ನೋಟೀಸ್ ನೀಡುವ ಬದಲು, ಕೆಲಸ ಮಾಡದೇ ಇರುವ ಪದಾಧಿಕಾರಿಗಳನ್ನ ನೇರವಾಗಿ ಬದಲಾವಣೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ. ಆಗಸ್ಟ್ 15 ಕ್ಕೆ ಪದಾಧಿಕಾರಿಗಳ ಬದಲಾವಣೆ ಪಟ್ಟಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ರವಾನೆಯಾಗಲಿದೆ.. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಮಾತ್ರ ಸದ್ಯ ನೋಟಿಸ್ ನೀಡಲು ಗುಂಡೂರಾವ್ ನಿರ್ಧರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ