
ಮುಂಬೈ: ಮರಾಠರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ನೀಡಬೇಕು ಎಂದು ಆಗ್ರಹಿಸಿ ಬುಧವಾರ ಮರಾಠಾ ಕ್ರಾಂತಿ ಮೋರ್ಚಾ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳು ಕರೆ ನೀಡಿದ್ದ ‘ಮಹಾರಾಷ್ಟ್ರ ಬಂದ್’ ಹಿಂಸಾತ್ಮಕವಾಗಿ ಅಂತ್ಯಗೊಂಡಿದೆ. ಎಲ್ಲಾ ಮುಗಿದ ಬಳಿಕ ಸಂಜೆ ವೇಳೆ ‘ಬಂದ್ ’ಅನ್ನು ಹೋರಾಟಗಾರರು ಹಿಂತೆಗೆದುಕೊಂಡಿದ್ದು, ಬಂದ್‌ಗೆ ಕರೆ ನೀಡಿದ್ದ ತಮ್ಮ ಉದ್ದೇಶ ಈಡೇರಿದೆ ಎಂದು ಹೇಳಿಕೊಂಡಿದ್ದಾರೆ.
ಮರಾಠರಿಗೆ ಮೀಸಲು ನೀಡಿಕೆ ಸಂಬಂಧ ಮಾತುಕತೆಗೆ ತಾವು ಸಿದ್ಧ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನ ವೀಸ್ ಪುನರುಚ್ಚರಿಸಿದ್ದಾರೆ. ಆದರೆ, ಬೇಡಿಕೆ ಈಡೇರದಿದ್ದರೆ ಆ.೯ರಂದು ಮತ್ತೆ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ.
ವ್ಯಾಪಕ ಹಿಂಸೆ: ನವೀ ಮುಂಬೈ ಮತ್ತು ಸತಾರಾದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ಕಾರಣ ಮೂವರು ಪೊಲೀಸರಿಗೆ ಗಾಯಗಳಾದವು. ಉದ್ರಿಕ್ತ ರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಪ್ಲಾಸ್ಟಿಕ್ ಬುಲೆಟ್‌ಗಳನ್ನು ಹಾರಿಸಿ, ಅಶ್ರುವಾಯು ಸಿಡಿಸಿದರು.
ಶಿವಸೇನೆ ಶಾಸಕ ರಾಜೀನಾಮೆ: ಈ ಮಧ್ಯೆ ಮೀಸಲಿಗೆ ಸುಗ್ರೀವಾಜ್ಞೆ ಬೇಡಿಕೆ ಇಟ್ಟು ಶಿವಸೇನಾ ಶಾಸಕ ಹರ್ಷ ವರ್ಧನ ಜಾಧವ್ ರಾಜೀನಾಮೆ ಸಲ್ಲಿಸಿದ್ದಾರೆ. ಇವರ ರಾಜೀನಾಮೆ ಬೆನ್ನಲ್ಲೇ ಇನ್ನೋರ್ವ NCP ಶಾಸಕ ಬಹುಸಾಹೇಬ್ ಚಿಟಗೋಂಕರ್ ರಾಜೀನಾಮೆ ನೀಡಿದ್ದು, ಈ ಮೂಲಕ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.