
ಬೆಂಗಳೂರು(ಡಿ.01): ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಇಂದು ಬೆಂಗಳೂರಿಗೆ ತರಲಾಗುತ್ತಿದೆ. ಬೆಳಗ್ಗೆ 11.30 ಕ್ಕೆ ಯಲಹಂಕದ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ಆಗಮಿಸಲಿರುವ ಮೇಜರ್ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ಅಧಿಕಾರಿಗಳು ಬರಮಾಡಿಕೊಳ್ಳಲಿದ್ದಾರೆ.
ನಂತರ 12.30ರ ವರೆಗೂ ಸೇನೆಯಿಂದ ಹುತಾತ್ಮ ಯೋಧನಿಗೆ ಗೌರವ ವಂಧನೆಯನ್ನ ಸಲ್ಲಿಸಲಿದ್ದು, ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೂ ಅಕ್ಷಯ್ ಕುಮಾರ್ ಅವರ ಅಪಾರ್ಟ್‍ಮೆಂಟ್ ಬಳಿ ಕುಟುಂಬ ಸದಸ್ಯರ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಗೆ ಯಲಹಂಕದ ಜೇಡ್ ಗಾರ್ಡನ್ ಗೇಟ್‍ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಮೆರವಣಿಗೆ ಮೂಲಕ ಹೆಬ್ಬಾಳದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.
ಇನ್ನು ಹುತಾತ್ಮ ಯೋಧನ ಅಂತಿ ದರ್ಶನಕ್ಕೆ ಝಡ ಗಾರ್ಡ್‍ನ್ ಬಳಿ ತಂಡೋಪತಂಡವಾಗಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಜತೆಗೆ ಯೋಧ ಅಕ್ಷಯ್ ಅವರ ಭಾವ ಚಿತ್ರವನ್ನ ಹಿಡಿದು ನಮನ ಸಲ್ಲಿಸುತ್ತಿದ್ದಾರೆ.
ತವರಿಗೆ ಬರುವ ಹಿಂದಿನ ದಿನವೇ ಮೇಜರ್ ಅಕ್ಷಯ್ ಹುತಾತ್ಮ
ನಗರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ ಡಿ.1ರಿಂದು ಅಕ್ಷಯ್ ಬೆಂಗಳೂರಿಗೆ ಬರಲು ಪ್ಲಾನ್ ಮಾಡಿ, ರಜೆ ಹಾಕಿದ್ದರು. ಆದರೆ ಜೀವಂತವಾಗಿ ಬರುವ ಬದಲು ಈಗ ಹುತಾತ್ಮರಾಗಿ ಅವರ ಶವ ಬರುತ್ತಿದೆ. ಅಪ್ಪ- ಅಮ್ಮ ಕೂಡ ಮಗ ಮೇಜರ್ ಅಕ್ಷಯ್ ಬರುತ್ತಾನೆ ಅಂತ ತಿಳಿದಿದ್ದರು. ಇಬ್ಬರೂ ಸಹೋದರಿಯರು ಅಣ್ಣನ ಬರುವಿಗೆ ಎದುರು ನೋಡುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.