ಅಮಾನವೀಯ ಕನ್ಯತ್ವ ಪರೀಕ್ಷೆಗೆ ಸರ್ಕಾರದಿಂದ ಬ್ರೇಕ್ ?

By Web DeskFirst Published Feb 7, 2019, 4:05 PM IST
Highlights

ಮದುವೆಗೂ ಮೊದಲು ಕನ್ಯತ್ವ ಪರೀಕ್ಷೆ ಎಂಬ ಅನಿಷ್ಟ ಪದ್ದತಿ| ಕೆಲವು ಸಮುದಾಯಗಳಲ್ಲಿ ಇಂದಿಗೂ ಆಚರಣೆಯಲ್ಲಿದೆ ಈ ಅನಿಷ್ಟ ಪದ್ದತಿ| ಕನ್ಯತ್ವ ಪರೀಕ್ಷೆ ಪದ್ದತಿ ವಿರುದ್ಧ ತೊಡೆ ತಟ್ಟಿ ನಿಂತ ಮಹಾರಾಷ್ಟ್ರ ಸರ್ಕಾರ| ಕನ್ಯತ್ವ ಪರೀಕ್ಷೆ ಆಚರಣೆ ಮೇಲೆ ನಿಷೇಧ ಹೇರಲು ಸಜ್ಜು| ಕಠಿಣ ಕಾನೂನು ಜಾರಿಗೆ ತರಲು ಮುಂದಾದ ‘ಮಹಾ’ ಸರ್ಕಾರ|   

ಮುಂಬೈ(ಫೆ.07): ಮಹತ್ವದ ಬೆಳವಣಿಗೆಯೊಂದರಲ್ಲಿ ಮದುವೆ ಸಂದರ್ಭದಲ್ಲಿ ಹೆಣ್ಣು ಕನ್ಯತ್ವ ಪರೀಕ್ಷೆಗೊಳಪಡುವ ಅಮಾನವೀಯ ಪದ್ದತಿಯನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಲು ಮುಂದಾಗಿದೆ.

ಮಹಾರಾಷ್ಟ್ರದ ಕೆಲವು ಸಮುದಾಯಗಳಲ್ಲಿ ಇಂತದ್ದೊಂದು ಅನಿಷ್ಟ ಪದ್ದತಿ ರೂಢಿಯಲ್ಲಿದ್ದು, ಮದುವೆಗೂ ಮುನ್ನ ಹೆಣ್ಣು ತನ್ನ ಕನ್ಯತ್ವವನ್ನು ಸಾಬೀತುಪಡಿಸುವ ಅನಿವಾರ್ಯತೆಗೆ ದೂಡಲ್ಪಟ್ಟಿದ್ದಾಳೆ.

ಇದೀಗ ಈ ಅನಿಷ್ಟ ಪದ್ದತಿಯನ್ನು ನಿಷೇಧಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರ ಈ ಕುರಿತು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ.

ಇತ್ತೀಚಿಗಷ್ಟೇ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ರಂಜಿತ್ ಪಾಟೀಲ್ ಅವರನ್ನು ಭೇಟಿ ಮಾಡಿದ್ದ ಮಹಾರಾಷ್ಟ್ರದ ಸಾಮಾಜಿಕ ಹೋರಾಟಗಾರರ ನಿಯೋಗ, ಕನ್ಯತ್ವ ಪರೀಕ್ಷೆಯಂತ ದುಷ್ಟ ಪದ್ದತಿಗೆ ಕಡಿವಾಣ ಹಾಕಬೇಕು ಎಂದು ಒತ್ತಯಿಸಿದ್ದವು.

ಅದರಂತೆ ಇದೀಗ ಕನ್ಯತ್ವ ಪರೀಕ್ಷೆ ವಿರುದ್ಧ ಕಠಿಣ ಕಾನೂನು ಜಾರಿಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಈ ಅನಿಷ್ಟ ಪದ್ದತಿ ತೊಲಗಿಸುವ ಭರವಸೆ ನೀಡಿದೆ.

ಕನ್ಯತ್ವ ಪ್ರೂವ್ ಮಾಡ್ಲಿಕ್ಕೂ ಬಂದಿದೆ ಮಾತ್ರೆ!

ಕನ್ಯತ್ವ ಸೀಲ್ಡ್‌ ಬಾಟಲ್‌ ಎಂದ ಪ್ರೊಫೆಸರ್ ಕತೆ ಏನಾಯ್ತು?

click me!