ಬೆಳಗಾವಿಯಷ್ಟೇ ಅಲ್ಲ, ಕಾರವಾರ, ನಿಪ್ಪಾಣಿ ಕೂಡ ನಮ್ಮದೇ ಎಂದ ಮಹಾರಾಷ್ಟ್ರ ಸಿಎಂ

Published : Oct 31, 2017, 11:52 AM ISTUpdated : Apr 11, 2018, 12:35 PM IST
ಬೆಳಗಾವಿಯಷ್ಟೇ ಅಲ್ಲ, ಕಾರವಾರ, ನಿಪ್ಪಾಣಿ ಕೂಡ ನಮ್ಮದೇ ಎಂದ ಮಹಾರಾಷ್ಟ್ರ ಸಿಎಂ

ಸಾರಾಂಶ

* ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಯುವಸಮುದಾಯದಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಂಪೈನ್ * ಬೆಳಗಾವಿ, ಕಾರವಾರ, ನಿಪ್ಪಾಣಿ ಮೊದಲಾದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು: ಮಹಾ ಸಿಎಂ ಹೇಳಿಕೆ * ಬೆಳಗಾವಿಯಲ್ಲಿ ಮರಾಠಿಗರ ಮೇಲೆ ನಿರಂತರ ದೌರ್ಜನ್ಯ: ಫಡ್ನವಿಸ್ ಕಿಡಿ * ಮರಾಠಿಗರ ನಾಡವಿರೋಧಿ ಹೇಳೀಕೆಗೆ ಕನ್ನಡಿಗರ ಆಕ್ರೋಶ

ಬೆಳಗಾವಿ(ಅ. 31): ಗಡಿನಾಡಿನಲ್ಲಿ ನಾಡವಿರೋಧಿಗರ ಪುಂಡಾಟ ಮಿತಿಮೀರಿ ಬೆಳೆಯುತ್ತಿದೆ. ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಯುವಕರು ಹೇಳುವ ದೊಡ್ಡೊಂದು ದುಷ್ಟ ಅಭಿಯಾನವು ಕುಂದಾನಗರಿಯಾದ್ಯಂತ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪುಂಡರ ರೋಷಾವೇಶದ ಹೇಳಿಕೆಗಳು ರಾರಾಜಿಸುತ್ತಿವೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಹಾರಾಷ್ಟ್ರ ಮುಖ್ಯಮತ್ತಿ ದೇವೇಂದ್ರ ಫಡ್ನವಿಸ್ ಅವರು ನಾಡವಿರೋಧಿ ಮರಾಠಿಗರ ಪುಂಡಾಟಕ್ಕೆ ಧ್ವನಿಗೂಡಿಸಿದ್ದಾರೆ. ಬೆಳಗಾವಿಯಷ್ಟೇ ಅಲ್ಲ, ಕಾರವಾರ, ನಿಪ್ಪಾಣಿ ಮೊದಲಾದ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಸಿಎಂ ಫಡ್ನವಿಸ್ ಹೇಳಿಕೆ ನೀಡುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.

ಬೆಳಗಾವಿಯಲ್ಲಿ ಮರಾಠಿಗರ ಮೇಲೆ ನಿರಂತರ ಅನ್ಯಾಯ ನಡೆಯುತ್ತಿದೆ. ಅಲ್ಲಿಯ ಯುವ ಮರಾಠ ಸಮುದಾಯದವರು ಕರ್ನಾಟಕದ ವಿರುದ್ಧ ಧ್ವನಿ ಎತ್ತುತ್ತಿರುವುದು ನ್ಯಾಯಯುತವಾಗಿಯೇ ಇದೆ ಎಂದು ಬಿಜೆಪಿ ಮುಖಂಡರೂ ಆಗಿರುವ ದೇವೇಂದ್ರ ಫಡ್ನವಿಸ್ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ.

ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಬೇಕು ಎಂದು ಒತ್ತಾಯಿಸುವ ಮರಾಠಿಗರ ನಾಡವಿರೋಧಿ ಧೋರಣೆ ಹಾಗೂ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಅವರ ಉದ್ಧಟತನದ ಹೇಳಿಕೆಗಳ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?