
ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅನ್ನಿಸುತ್ತದೆ ಮತ್ತೊಂದು ರಾಜ್ಯದ ಚುನಾವಣೆಯತ್ತ ರಾಜ್ಯದ ರಾಜಕಾರಣಿಗಳು ಲಕ್ಷ್ಯವಿಟ್ಟು ಕುಳಿತಿದ್ದಾರೆ. ರಾಜ್ಯದ ಮೂರು ಪ್ರಮುಖ ಪಕ್ಷಗಳ ರಾಜಕಾರಣಿಗಳು ಗುಜರಾತ್ ಫಲಿತಾಂಶ ಏನಾಗಬಹುದು ಎಂಬುದರ ಮೇಲೆ ಕರ್ನಾಟಕದ ರಣತಂತ್ರವನ್ನು ಹೆಣೆಯಲಿದ್ದಾರೆ. ಹೀಗಾಗಿ ಯಡಿಯೂರಪ್ಪ, ದೇವೇಗೌಡರು, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ರಾಜಕಾರಣಿಗಳು ದೆಹಲಿ ಪತ್ರಕರ್ತರು ಸಿಕ್ಕರೆ ಖಾಸಗಿಯಾಗಿ ಕೇಳುವ ಮೊದಲ ಪ್ರಶ್ನೆಯೇ ಗುಜರಾತ್'ನಲ್ಲಿ ಏನಾಗುತ್ತದೆ ಎಂದು. ಬರೀ ರಾಜಕಾರಣಿಗಳೇ ಏಕೆ, ರಾಜ್ಯದ 6 ರಿಂದ 8 ಪ್ರತಿಶತ ಮತದಾರರು ಕೂಡ ಗುಜರಾತ್ ಫಲಿತಾಂಶ ಮತ್ತು ಅಭ್ಯರ್ಥಿ ನೋಡಿಕೊಂಡು ನಿರ್ಧರಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಕರ್ನಾಟಕದಲ್ಲಿ ಖಾಸಗಿ ಕಂಪನಿಯಿಂದ ನಡೆಸುತ್ತಿರುವ ಸರ್ವೇಯ ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಬಿಜೆಪಿಗೆ 75 ರಿಂದ 85 ಸ್ಥಾನಗಳು, ಕಾಂಗ್ರೆಸ್'ಗೂ ಕೂಡ ಹೆಚ್ಚು ಕಡಿಮೆ ಅಷ್ಟೇ ಸ್ಥಾನಗಳು ಹಾಗೂ ಜೆಡಿಎಸ್ ಮತ್ತು ಪಕ್ಷೇತರರು ಸೇರಿ 60 ಸ್ಥಾನಗಳನ್ನು ಪಡೆಯಬಹುದು ಎಂಬ ಅಂದಾಜಿದೆ. ಆದರೆ ಅತ್ತ ಇತ್ತ ನೋಡುತ್ತಾ ಕಾಂಪೌಂಡ್ ಮೇಲೆ ಕುಳಿತಿರುವ ಮತದಾರರಿಗೆ ಗುಜರಾತ್ ಫಲಿತಾಂಶದ ನಂತರ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಬಹುದು. ಒಂದು ವೇಳೆ ಗುಜರಾತ್'ನಲ್ಲಿ ಬಿಜೆಪಿ ಸುಲಭವಾಗಿ ಗೆದ್ದರೆ, ಕರ್ನಾಟಕದಲ್ಲಿ ಬಿಜೆಪಿ 100ರ ಗಡಿವರೆಗೆ ಹೋಗಲು ಮಾರ್ಗ ಸುಲಭವಾಗಬಹುದು. ಅದಾಗದೆ ಬಿಜೆಪಿ ತಿಣಕಾಡಿದರೆ ಕರ್ನಾಟಕದಲ್ಲಿ ಬಿಜೆಪಿ 1999ರ ಸ್ಥಿತಿಗೆ ಹೋದರೂ ಆಶ್ಚರ್ಯ ಪಡಬೇಕಿಲ್ಲ ಎನ್ನುತ್ತಾರೆ ಕರ್ನಾಟಕದಲ್ಲಿ ಓಡಾಡಿ ಸರ್ವೇ ನಡೆಸುತ್ತಿರುವವರು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್
epaperkannadaprabha.com
------
ಇಂಡಿಯಾ ಗೇಟ್ ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ
ಇವನ್ನೂ ಓದಿ:
* ರಾಹುಲ್'ಗೆ ಪಟ್ಟ; ಸೋನಿಯಾ ಕನ್'ಫ್ಯೂಷನ್; ಕಾರಣ ಏನು?
* ಕಾಂಗ್ರೆಸ್ ಗೆದ್ದರೆ ಆಂಜನೇಯ ಉಪಮುಖ್ಯಮಂತ್ರಿ?
* ಗುಜರಾತ್'ನಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹೇಗೆ ನಡೆಯುತ್ತೆ?
* ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಅಖಾಡಕ್ಕಿಳಿಯಲಿರುವ 250 ಪ್ರಬಲ ಆರೆಸ್ಸೆಸ್ ವಿಸ್ತಾರಕರು
* ದಿಲ್ಲಿ ಜನರ ಬಗ್ಗೆ ಗಡ್ಕರಿಗೆ ಯಾಕೆ ಬೇಜಾರು? ಮಂಚ ಮುರಿದುಬಿದ್ದ ಪ್ರಸಂಗ ನೆನಪಿಸಿಕೊಂಡ ಗಡ್ಕರಿ
* ಟಿಪ್ಪು ಹೊಗಳಿದ ರಾಷ್ಟ್ರಪತಿಗೆ ಆ ಭಾಷಣ ಬರೆದುಕೊಟ್ಟವರಾರು? ಇಲ್ಲಿದೆ ಸೀಕ್ರೆಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.