ಉಪ್ಪಿ ಹೊಸ ಪಕ್ಷ ಕೆಪಿಜೆಪಿ; ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ

Published : Oct 31, 2017, 10:41 AM ISTUpdated : Apr 11, 2018, 12:50 PM IST
ಉಪ್ಪಿ ಹೊಸ ಪಕ್ಷ ಕೆಪಿಜೆಪಿ; ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ

ಸಾರಾಂಶ

* ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷದ ಹೆಸರು ಬಹಿರಂಗ * ಕೆಪಿಜೆಪಿ: ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ * ಆಟೋರಿಕ್ಷಾ, ಚಪ್ಪಲಿ ಸೇರಿದಂತೆ 3 ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿರುವ ಉಪ್ಪಿ

ಬೆಂಗಳೂರು(ಅ. 31): ಎರಡು ತಿಂಗಳ ಹಿಂದೆ ಪ್ರಜಾಕೀಯವೆಂಬ ಹೊಸ ಆಯಾಮದಲ್ಲಿ ಹೊಸ ಪಕ್ಷ ಕಟ್ಟುವ ಘೋಷಣೆ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಇಂದು ಹೊಸ ಪಕ್ಷದ ಹೆಸರನ್ನು ಬಹಿರಂಗಪಡಿಸಿದ್ದಾರೆ. ಕೆಪಿಜೆಪಿ - ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷವು ಉಪೇಂದ್ರರವರ ಹೊಸ ಪಕ್ಷದ ಹೆಸರಾಗಿದೆ. ನಗರದ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಿಯಲ್ ಸ್ಟಾರ್ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಆಟೋರಿಕ್ಷಾಗೆ ಉಪ್ಪಿ ಪಟ್ಟು?
ತಮ್ಮ ಪಕ್ಷದ ಚಿಹ್ನೆಯು ಕಾರ್ಮಿಕರು ಮತ್ತು ಕೆಳವರ್ಗದವರನ್ನು ಬಿಂಬಿಸುವಂತಿರಬೇಕು ಎಂಬುದು ಉಪೇಂದ್ರ ಅವರ ಯೋಜನೆ. ಈ ನಿಟ್ಟಿನಲ್ಲಿ ತಮ್ಮ ನೂತನ ಪಕ್ಷಕ್ಕಾಗಿ ಉಪೇಂದ್ರ 3 ಚಿಹ್ನೆಗಳನ್ನು ಸಿದ್ಧ ಮಾಡಿದ್ದಾರೆ. ಆಟೋರಿಕ್ಷಾ, ಚಪ್ಪಲಿ ಒಳಗೊಂಡಂತೆ ಆ 3 ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರೆ. ಆಟೋರಿಕ್ಷಾ ಚಿಹ್ನೆ ಬಗ್ಗೆ ಉಪೇಂದ್ರರಿಗೆ ಮೊದಲ ಆದ್ಯತೆ ಇದೆ ಎನ್ನಲಾಗಿದೆ.

ಎರಡು ತಿಂಗಳಿನಿಂದ ಉಪೇಂದ್ರ ಅವರು ತಮ್ಮ ಹೊಸ ಪಕ್ಷದ ಧ್ಯೇಯೋದ್ದೇಶಗಳನ್ನು ರೂಪಿಸಲು ನಿರಂತರ ಶ್ರಮ ಹಾಕಿದ್ದಾರೆ. ವಿವಿಧ ಕ್ಷೇತ್ರಗಳ ಪರಿಣತರೊಂದಿಗೆ ಕೂತು ಸಮಾಲೋಚನೆ ಮಾಡಿ ತಮ್ಮ ಪಕ್ಷಕ್ಕೆ ರೂಪುರೇಷೆ ರಚಿಸಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ, ಪ್ರಜೆಯೇ ರಾಜ ಎಂದು ತಿಳಿದು ಕಾರ್ಮಿಕನಂತೆ ಕೆಲಸ ಮಾಡುವ ಜನಪ್ರತಿನಿಧಿಗಳನ್ನು ನೀಡುವುದು ಉಪೇಂದ್ರ ಅವರ ಚಿಂತನೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ ಕೈ-ಬಿಜೆಪಿ ನಡುವೆ ಗದ್ದಲ
ಶಿವಾನಂದ ಮಠದ ಸರಸ್ವತಿ ಸ್ವಾಮಿಯ ಕಾಮ ಪುರಾಣ; ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸ್ಕೊಂಡ!