ಐವರು ಶಾಸಕರ ರಾಜೀನಾಮೆ : ಸಭೆ ಕರೆದ ಸಿಎಂ

By Web DeskFirst Published Jul 27, 2018, 12:21 PM IST
Highlights

ಐವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮಾತುಕತೆಗಾಗಿ ಸಭೆ ಕರೆದಿದ್ದಾರೆ. ಮರಾಠ ಹೋರಾಟಕ್ಕೆ ಬೆಂಬಲ ಸೂಚಿಸಿ ಐವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಮುಂಬೈ :  ಮರಾಠ ಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿ ಐವರು ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಪಕ್ಷದ ಮುಖಂಡರ ಸಭೆ ಕರೆದಿದ್ದಾರೆ.  

ಸಿಎಂ ಮಾತುಕತೆ ಸಿದ್ಧ ಎಂದು ಹೇಳಿದ ಬಳಿಕ ಮರಾಠ ಮೀಸಲಾತಿ ಹೋರಾಟಗಾರರು ಬಂದ್ ಕೈ ಬಿಟ್ಟು, ಬೇಡಿಕೆ ಈಡೇರದಿದ್ದಲ್ಲಿ ಮತ್ತೆ ಪ್ರತಿಭಟನೆ ಕೈ ಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಅದಾದ ಬಳಿಕ ಮರಾಠ ಹೋರಾಟಕ್ಕೆ ಬೆಂಬಲ ಸೂಚಿಸಿ ಒಟ್ಟು 5 ಮಂದಿ ಶಾಸಕರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಕಾಂಗ್ರೆಸ್ ಶಾಸಕ ಭರತ್ ಬಾಳ್ಕೆ ಹಾಗೂ ಬಿಜೆಪಿ ಶಾಸಕ ರಾಹುಲ್ ಅಹೆರ್ ಹಾಗೂ ಎನ್ ಸಿಪಿ ಶಾಸಕ ದತ್ತಾತ್ರೇಯಾ ಬಾರ್ನೆ ರಾಜೀನಾಮೆ ನೀಡಿದ್ದರು. ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಪಕ್ಷದ ಮುಖಂಡರ ಸಭೆ ಕರೆದಿದ್ದು, ಈ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ. ಸದ್ಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. 

ಮರಾಠರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ನೀಡಬೇಕು ಎಂದು ಆಗ್ರಹಿಸಿ ಬುಧವಾರ ಮರಾಠಾ ಕ್ರಾಂತಿ ಮೋರ್ಚಾ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳು ಕರೆ ನೀಡಿದ್ದ ‘ಮಹಾರಾಷ್ಟ್ರ ಬಂದ್’ ಹಿಂಸಾತ್ಮಕವಾಗಿ ಅಂತ್ಯಗೊಂಡಿತ್ತು. 

click me!