
ಚೆನ್ನೈ: ಸೂಕ್ತ ಚಿಕಿತ್ಸೆ ದೊರೆಯದೆ ಮಹಿಳೆಯರು ಹೆರಿಗೆ ಸಮಯದಲ್ಲಿ ಸಾವನ್ನಪ್ಪುವ ಘಟನೆ ಎಲ್ಲೆಡೆ ಸಾಮಾನ್ಯ. ಆದರೆ ಎಲ್ಲಾ ಸೌಲಭ್ಯ ದ್ದರೂ, ಅದನ್ನು ಬಳಸುವ ಬದಲು, ಮನೆಯಲ್ಲೇ ಯುಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಿಕೊಳ್ಳಲು ಹೋದ ಮಹಿಳೆಯೊಬ್ಬರು ರಕ್ತಸ್ರಾವದಿಂದ ಸಾವನ್ನಪ್ಪಿದ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೃತಿಕಾ (28 )ಗೆ ಆಧುನಿಕ ವೈದ್ಯಕೀಯ ಚಿಕಿತ್ಸೆ ಬಗ್ಗೆ ಒಲವು ಇರಲಿಲ್ಲ. ಜೊತೆಗೆ ಅವರ ಕುಟುಂಬ ಸ್ನೇಹಿತರೊಬ್ಬರು ಕೂಡಾ ಮನೆಯಲ್ಲೇ ಸುಲಭವಾಗಿ ಹೆರಿಗೆ ಮಾಡಿಕೊಳ್ಳಬಹುದು ಎಂದು ಪುಕ್ಕಟೆ ಸಲಹೆ ನೀಡಿದ್ದರು. ಹೀಗಾಗಿ ಖಾಸಗಿ ಕಂಪನಿಯ ನೌಕರನಾದ ಕಾರ್ತಿಕೇ ಯನ್ ಮತ್ತು ಕೃತಿಕಾ ಹಲವು ಬಾರಿ ಯಟ್ಯೂಬ್‌ನಲ್ಲಿ ಮನೆಯಲ್ಲೇ ಹೇಗೆ ಹೆರಿಗೆ ಮಾಡಿಕೊಳ್ಳುವುದು ಎಂಬ ವಿಡಿಯೋಗಳನ್ನು ವೀಕ್ಷಿಸಿದ್ದರು.
ಕೃತಿಕಾಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮನೆಯಲ್ಲೇ ಹೆರಿಗೆಗೆ ಮುಂದಾದರು. ಆದರೆ ಸೂಕ್ತ ಸಮಯದಲ್ಲಿ ಮಾಸು ಹೊರಬರದ ಕಾರಣ, ತೀವ್ರ ರಕ್ತಸ್ರಾವದಿಂದ ಕೃತಿಕಾ ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.