
ಚೆನ್ನೈ[ಜು.02]: ರಾಜಕಾರಣಿಗಳು ತಾವು ಅಧಿಕಾರಕ್ಕೆ ಬಂದ ಬಳಿಕ ಕೈಗೊಂಡ ಕೆಲಸಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುವುದು ಮಾಮೂಲಿ. ಹೆಚ್ಚೂಕಡಿಮೆ ಇದೇ ಹಾದಿ ತುಳಿದಿರುವ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು, ಜಡ್ಜ್ ಹುದ್ದೆಗೇರಿದ 2 ವರ್ಷಗಳ ಅವಧಿಯಲ್ಲಿ ತಾವು ಮಾಡಿರುವ ಸಾಧನೆಗಳ ಪಟ್ಟಿಯನ್ನು ವಕೀಲರ ಸಂಘದ ಮುಂದಿಟ್ಟು ಗಮನಸೆಳೆದಿದ್ದಾರೆ. ನ್ಯಾಯಮೂರ್ತಿಯೊಬ್ಬರು ಈ ರೀತಿ ಸಾಧನಾ ವರದಿಯನ್ನು ಬಿಡುಗಡೆಗೊಳಿಸಿರುವುದು ಬಲು ಅಪರೂಪ, ಪ್ರಾಯಶಃ ಇದೇ ಮೊದಲು.
ಜೂ.27ರಂದು ಎರಡು ಪುಟಗಳ ಪತ್ರವನ್ನು ವಕೀಲರ ಸಂಘದ ಸದಸ್ಯರಿಗೆ ಬರೆದಿರುವ ನ್ಯಾ| ಸ್ವಾಮಿನಾಥನ್ ಅವರು, ನ್ಯಾಯಮೂರ್ತಿಯಾಗಿ 2017ರ ಜೂ.28ರಂದು ಅಧಿಕಾರ ವಹಿಸಿಕೊಂಡಿದ್ದೆ. ಈ ಎರಡು ವರ್ಷಗಳ ಅವಧಿಯಲ್ಲಿ 18,944 ಮುಖ್ಯ ಪ್ರಕರಣಗಳನ್ನು ವೈಯಕ್ತಿಕವಾಗಿ ಇತ್ಯರ್ಥಗೊಳಿಸಿದ್ದೇನೆ. 2534 ಪ್ರಕರಣಗಳನ್ನು ವಿವಿಧ ವಿಭಾಗೀಯ ಪೀಠಗಳಲ್ಲಿದ್ದುಕೊಂಡು ಬಗೆಹರಿಸಿದ್ದೇನೆ.
ಹಲವಾರು ಪ್ರಕರಣಗಳ ವಿಚಾರಣೆ ಮುಗಿಸಿ ತೀರ್ಪು ಕಾದಿರಿಸಿದ್ದೇನೆ. ಆ ಪ್ರಕರಣಗಳ ತೀರ್ಪನ್ನು ಪ್ರಕಟಿಸಲಾಗದಿರುವುದಕ್ಕೆ ವಕೀಲರು ಹಾಗೂ ಕಕ್ಷಿದಾರರ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.