ಪಾಕ್‌ನಲ್ಲಿ ಭಾರತದ 261, ಭಾರತದಲ್ಲಿ ಪಾಕ್‌ನ 355 ಕೈದಿಗಳು!

Published : Jul 02, 2019, 11:24 AM IST
ಪಾಕ್‌ನಲ್ಲಿ ಭಾರತದ 261, ಭಾರತದಲ್ಲಿ ಪಾಕ್‌ನ 355 ಕೈದಿಗಳು!

ಸಾರಾಂಶ

ಭಾರತದಲ್ಲಿ ಪಾಕ್‌ನ 355, ಪಾಕ್‌ನಲ್ಲಿ ಭಾರತದ 261 ಕೈದಿಗಳಿಗೆ ಜೈಲು ಶಿಕ್ಷೆ| ಭಾರತೀಯ ಕೈದಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಮತ್ತು ಆದಷ್ಟುಶೀಘ್ರ ಬಿಡುಗಡೆ ಮಾಡುವಂತೆ ಭಾರತ ಕೋರಿಕೆ

ಇಸ್ಲಾಮಾಬಾದ್‌[ಜು.02]: ದೂತಾವಾಸ ಬಳಕೆ ಒಪ್ಪಂದದ ಅಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೋಮವಾರ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ.

ಈ ಪ್ರಕಾರ 52 ಮೀನುಗಾರರು ಮತ್ತು 209 ನಾಗರಿಕರು ಸೇರಿದಂತೆ 261 ಭಾರತೀಯರು ಜೈಲು ವಾಸ ಅನುಭವಿಸುತ್ತಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ತಿಳಿಸಿದೆ.

ಅದೇ ರೀತಿ 99 ಮೀನುಗಾರರು ಹಾಗೂ 256 ಪಾಕಿಸ್ತಾನದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಭಾರತ ತಿಳಿಸಿದೆ.

ಇದೇ ವೇಳೆ ಭಾರತೀಯ ಕೈದಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಮತ್ತು ಆದಷ್ಟುಶೀಘ್ರ ಬಿಡುಗಡೆ ಮಾಡುವಂತೆ ಭಾರತ ಕೋರಿಕೆ ಸಲ್ಲಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Davanagere By-election 2026: ದಾವಣಗೆರೇಲಿ ಪಕ್ಷ ವಿರೋಧಿ ನಡೆಗೆ ಕಾಂಗ್ರೆಸ್‌ನಲ್ಲಿ ಇಬ್ಬರು ನಾಯಕರ ತಲೆದಂಡ,
Delhi Karnataka Sangha Election: ದೆಹಲಿ ಕರ್ನಾಟಕ ಸಂಘಕ್ಕೆ ಇಂದು ಚುನಾವಣೆ, ಚುನಾವಣೆಗೆ ಮೊದಲೇ ಕುಸ್ತಿ, ಏನಿದು ಜೂಮ್ ಮೀಟಿಂಗ್ ವಿವಾದ?