ದೇಶದ ಹೆಸರು ಬದಲಾವಣೆಗೆ ಸಂಸತ್ ಒಪ್ಪಿಗೆ

By Web DeskFirst Published Oct 20, 2018, 3:20 PM IST
Highlights

ದೇಶದ ಹೆಸರನ್ನು ಬದಲಾವಣೆ ಮಾಡಲು ಇದೀಗ ಸಂಪುಟದಲ್ಲಿ ಒಪ್ಪಿಗೆ ದೊರಕಿದಂತಾಗಿದೆ. 

ಸ್ಕೋಪ್ಜೆ : ಮೆಸೆಡೋನಿಯಾ ದೇಶದ ಹೆಸರು ಬದಲಾವಣೆ ಮಾಡಲು ಅಲ್ಲಿನ ಸಂಸತ್ ಅಂಗೀಕಾರ ನೀಡಿದೆ. 

ಅತ್ಯಂತ ಹಳೆಯ ಚರ್ಚಿತ ವಿಚಾರವಾದ ಇದಕ್ಕೆ ಕೊನೆಗೂ ಸಂಪುಟದಲ್ಲಿ ಅಂಕಿತ ದೊರಕಿದಂತಾಗಿದೆ. ಒಟ್ಟು 120 ಮಂದಿ ಸಂಸದರಲ್ಲಿ 80 ಮಂದಿ ಹೆಸರು ಬದಲಾವಣೆ ಪರವಾಗಿ ಮತ ಚಲಾಯಿಸಿದ್ದಾರೆ. 

ಮೆಸೆಡೋನಿಯಾ ದೇಶದ ಹೆಸರನ್ನು ಬಲ್ಕನ್ ಕಂಟ್ರಿ ರಿಪಬ್ಲಿಕ್ ಆಫ್ ನಾರ್ಥ್ ಮೆಸೆಡೋನಿಯಾ ಎಂದು ಬದಲಾವಣೆ ಮಾಡಲು ಅಂಕಿತ ದೊರಕಿದಂತಾಗಿದೆ. 

ಕಳೆದ ಜೂನ್ ತಿಂಗಳಲ್ಲಿಯೇ ಹೆಸರು ಬದಲಾವಣೆ ಒಪ್ಪಂದ ನಡೆದಿತ್ತು. ಇದೀಗ ಅಧಿಕೃತವಾಗಿ ಬದಲಾವಣೆಗೆ ಅಂಗೀಕಾರ ದೊರಕಿದಂತಾಗಿದೆ. 

click me!