ತೋಂಟದಾರ್ಯ ಶ್ರೀಗಳ ಬಗ್ಗೆ ತಿಳಿದಿರಬೇಕಾದ ಇಂಟರೆಸ್ಟಿಂಗ್ ವಿಚಾರಗಳು

Published : Oct 20, 2018, 02:53 PM IST
ತೋಂಟದಾರ್ಯ ಶ್ರೀಗಳ ಬಗ್ಗೆ ತಿಳಿದಿರಬೇಕಾದ ಇಂಟರೆಸ್ಟಿಂಗ್ ವಿಚಾರಗಳು

ಸಾರಾಂಶ

ತೀವ್ರ ಹೃದಯಾಘಾತದಿಂದ ಗದಗಿನ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಅವರ ಬಗ್ಗೆ ನಿಮಗೆ ತಿಳಿದಿರದ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ಗದಗ : ತೀವ್ರ ಹೃದಯಾಘಾತದಿಂದ ಗದಗಿನ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.  ನಿನ್ನೆ ರಾತ್ರಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಶ್ರೀಗಳಿಗೆ ಮಠದ ತಮ್ಮ ಕೊಠಡಿಯಲ್ಲಿ ನಿದ್ರೆ ಮಾಡುವ ವೇಳೆಯಲ್ಲೇ ಹೃದಯಘಾತವಾಗಿದೆ ಎನ್ನಲಾಗಿದೆ. 

ಇನ್ನು ನಾಡಿನ ಬಗ್ಗೆ ಅಪಾರವಾದ ಕಾಳಜಿಹೊಂದಿದ್ದ ಶ್ರೀಗಳು ಬಸವಣ್ಣನ ಆಶಯಗಳಿಗೆ ಅನುಗುಣವಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದ ಮಹಾನ್ ಮೇದಾವಿಯಾಗಿದ್ದರು. 

ಇನ್ನು ಶ್ರೀಗಳ ಸಾವು, ಅಪಾರವಾದ ಭಕ್ತ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ. 

ಶ್ರೀಗಳ ಬಗ್ಗೆ ಇನ್ನಷ್ಟು

ಇವರು ಪುಸ್ತಕಗಳ ಸ್ವಾಮೀಜಿ ಎಂದು ಗುರುತಿಸಿಕೊಂಡಿದ್ದರು : ಪುಸ್ತಕ ಪ್ರೇಮಿಯಾಗಿದ್ದು, ಸಾಕಷ್ಟು ಓದುವ ಹ್ಯಾಸವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪುಸ್ತಕ ಸ್ವಾಮೀಜಿ ಎಂದು ಕರೆಸಿಕೊಂಡಿದ್ದರು.

ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ ಸೇರಿ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು : ಸಾಕಷ್ಟು ಹೋರಾಟಗಳಲ್ಲಿ ಪಾಲ್ಗೊಂಡು ಹೆಸರು ಮಾಡಿದ್ದರು.

ಸ್ವಾಮೀಜಿ ನೇತೃತ್ವದಲ್ಲಿ ಮಠದಲ್ಲಿ ಪ್ರತಿವಾರ ಶಿವಾನುಭವ ಕಾರ್ಯಕ್ರಮ ಆಯೋಜನೆ 

ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರದ ವಿಷಯಗಳ ಚರ್ಚೆ : ಹಲವು ವಿಚಾರಗಳ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಅವರು ವಿವಿಧ ಚರ್ಚಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಎಂ.ಎಂ.ಕಲಬುರಗಿ ಅವರ ವಿದ್ಯಾರ್ಥಿಯಾಗಿದ್ದ  ಸಿದ್ದಲಿಂಗ ಸ್ವಾಮೀಜಿ : ಗುಂಡೇಟಿಗೆ ಬಲಿಯಾಗಿದ್ದ ಸಾಹಿತಿ ಎಂ.ಎಂ.ಕಲಬುರಗಿ ಅವರ ಶಿಷ್ಯರಾಗಿದ್ದರು.

ಗುರು ಶಿಷ್ಯರಿಬ್ಬರು ಸಹ ವಿಜಯಪುರ ಜಿಲ್ಲೆ ಸಿಂಧಗಿ ಮೂಲದವರು 

 ಅಸಂಖ್ಯಾತ ಭಕ್ತ ಸಮೂಹವನ್ನ ಹೊಂದಿದ್ದ ಸಿದ್ದಲಿಂಗ ಸ್ವಾಮೀಜಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?