ಕಸಾಯಿಖಾನೆಗಳ ಮುಚ್ಚುಗಡೆ: ಮಾಂಸ ವರ್ತಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

By Suvarna Web DeskFirst Published Mar 25, 2017, 1:07 PM IST
Highlights

ಮಾಂಸದ ಅಲಭ್ಯತೆಯಿಂದಾಗಿ ಮಾಂಸಾಹಾರ ಹೋಟೆಲ್’ಗಳು ಕೂಡಾ ಮುಚ್ಚಿವೆ ಎಂದು ವರದಿಯಾಗಿದೆ.  ಕಸಾಯಿಖಾನೆಗಳನ್ನು ಮುಚ್ಚುವ ಸರ್ಕಾರದ ಕ್ರಮದಿಂದಾಗಿ ಲಕ್ಷಾಂತರ ಮಂದಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ಮಾಂಸ ವರ್ತಕರ ಸಂಘದ ಖುರೇಶಿ ಹೇಳಿದ್ದಾರೆ.

ಲಕ್ನೋ (ಮಾ.25): ಅನಧಿಕೃತ ಹಾಗೂ ಯಾಂತ್ರಿಕೃತ ಕಸಾಯಿಖಾನೆಗಳಿಗೆ ತ್ತರ ಪ್ರದೆಶ ಸರ್ಕಾರ  ಬೀಗ ಜಡಿಯುತ್ತಿರುವ ಕ್ರಮವನ್ನು ಖಂಡಿಸಿ, ಮಾಂಸ ಮಾರಾಟಗಾರರು ಅನಿರ್ದಷ್ಟಾವಧಿ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.

ಕೋಳಿ ಹಾಗೂ ಮೇಕೆ ಮಾಂಸ ಮಾರಾಟಗಾರು ಕೂಡಾ ಅಂಗಡಿಗಳನ್ನು ಮುಚ್ಚಿದ್ದು, ಸೋಮವಾರದಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಮಾಂಸ ವ್ಯಾಪಾರಸ್ಥ ಸಂಘದ ಅಧ್ಯಕ್ಷ ಮುಬೀನ್ ಖುರೇಶಿ ಹೇಳಿದ್ದಾರೆ.

Latest Videos

ಮಾಂಸದ ಅಲಭ್ಯತೆಯಿಂದಾಗಿ ಮಾಂಸಾಹಾರ ಹೋಟೆಲ್’ಗಳು ಕೂಡಾ ಮುಚ್ಚಿವೆ ಎಂದು ವರದಿಯಾಗಿದೆ.  ಕಸಾಯಿಖಾನೆಗಳನ್ನು ಮುಚ್ಚುವ ಸರ್ಕಾರದ ಕ್ರಮದಿಂದಾಗಿ ಲಕ್ಷಾಂತರ ಮಂದಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ಖುರೇಶಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮೀನು ಮಾರಾಟಗಾರು ಕೂಡಾ ಪ್ರತಿಭಟನೆಯನ್ನು ಬೆಂಬಲಿಸಲಿದ್ದಾರೆ ಎಂದು ಖುರೇಶಿ ಹೇಳಿದ್ದಾರೆ.

ಸರ್ಕಾರವು ಕೇವಲ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಬಯಸುತ್ತದೆ, ಆದುದರಿಂದ ವರ್ತಕರು ಆತಂಕಗೊಳ್ಳಬೇಕೆಂದಿಲ್ಲವೆಂದು ಬಿಜೆಪಿ ನಾಯಕ ಮಝರ್ ಅಬ್ಬಾಸ್ ಹೇಳಿದ್ದಾರೆ.  

click me!