ಬಂಪರ್ ಉಚಿತ ಇಂಟರ್'ನೆಟ್ ಆಫರ್ ಪ್ರಕಟಿಸಿದ ಬಿಎಸ್'ಎನ್'ಎಲ್

Published : Mar 25, 2017, 12:25 PM ISTUpdated : Apr 11, 2018, 12:44 PM IST
ಬಂಪರ್ ಉಚಿತ ಇಂಟರ್'ನೆಟ್ ಆಫರ್ ಪ್ರಕಟಿಸಿದ ಬಿಎಸ್'ಎನ್'ಎಲ್

ಸಾರಾಂಶ

ಉಳಿದ ಟೆಲಿಕಾಂ ಸಂಸ್ಥೆಗಳು ಜಿದ್ದಿಗೆ ಬಿದ್ದವರಂತೆ ಉಚಿತ ಆಫರ್'ಗಳನ್ನು ಪ್ರಕಟಿಸುತ್ತಿವೆ.

ನವದೆಹಲಿ(ಮಾ.25): ರಿಲಯನ್ಸ್ ಜಿಯೊ ಯಾವಾಗ  6 ತಿಂಗಳು ಕಾಲ ತನ್ನ ಗ್ರಾಹಕರಿಗೆ ಉಚಿತ ಇಂಟರ್'ನೆಟ್ ಸೇವೆ ಒದಗಿಸಿತೊ ಉಳಿದ ಟೆಲಿಕಾಂ ಸಂಸ್ಥೆಗಳು ಜಿದ್ದಿಗೆ ಬಿದ್ದವರಂತೆ ಉಚಿತ ಆಫರ್'ಗಳನ್ನು ಪ್ರಕಟಿಸುತ್ತಿವೆ.

ಸರ್ಕಾರಿ ಸ್ವಾಮ್ಯದ ಬಿಎಸ್'ಎನ್'ಎಲ್ ಸಂಸ್ಥೆ ಸ್ಮಾರ್ಟ್ ಫೋನ್ ಹೊಂದಿದ್ದು, ಜಿಎಸ್'ಎಂ ಮೊಬೈಲ್ ಡಾಟಾ ಸೇವೆಗಳನ್ನು ಉಪಯೋಗಿಸದ ಬಳಕೆದಾರರಿಗೆ 1 ಜಿಬಿ ಉಚಿತ ಇಂಟರ್'ನೆಟ್ ಸೌಲಭ್ಯ ಪ್ರಕಟಿಸಿದೆ. ಈ ಸೇವೆ ಪ್ರೀಪೇಯ್ಡ್ ಸಿಮ್ ಹೊಂದಿರುವವರಿಗೆ ಅನ್ವಯವಾಗಲಿದೆ.

ಈಗಾಗಲೇ ಬಿಎಸ್'ಎನ್'ಎಲ್' ಜಿಯೋಗೆ ಸಮನಾಗಿ 339 ರೂ.ಗಳಿಗೆ ನಿತ್ಯ 2 ಜಿಬಿ ಇಂಟರ್'ನೆಟ್, 25 ನಿಮಿಷ ಉಚಿತ ಕರೆ ಹಾಗೂ 25 ನಿಮಿಷದ ನಂತರ ಪ್ರತಿ ನಿಮಿಷಕ್ಕೆ 25 ಪೈಸೆಯಂತೆ ಕರೆ ದರವನ್ನು ಪ್ರಕಟಿಸಿದೆ. ಜಿಯೋ ಏಪ್ರಿಲ್ 1ರಿಂದ 303 ರೂ.ಗಳಿಗೆ ನಿತ್ಯ 1 ಜಿಬಿ ಇಂಟರ್'ನೆಟ್ ಹಾಗೂ ಉಚಿತ ಕರೆ ಹಾಗೂ ಎಸ್'ಎಂಎಸ್ ಆಫರ್ ಕಲ್ಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?