ಸರ್ಜಿಕಲ್‌ ದಾಳಿ ಹೀರೋ ಕಾಂಗ್ರೆಸ್‌ ಸಮಿತಿಗೆ ಬಾಸ್‌

By Web DeskFirst Published Feb 22, 2019, 9:03 AM IST
Highlights

2016ರಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ನಡೆಸಿದ್ದ ಸರ್ಜಿಕಲ್‌ ದಾಳಿಯ ಹೀರೋ ಡಿ.ಎಸ್‌. ಹೂಡಾ ಅವರು ಆ ಕಾರ್ಯಪಡೆಗೆ ಮುಖ್ಯಸ್ಥರಾಗಿದ್ದಾರೆ. ಉತ್ತರ ವಲಯದ ಮಾಜಿ ಸೇನಾ ಕಮಾಂಡರ್‌ ಆಗಿರುವ ಹೂಡಾ ಅವರನ್ನು ಗುರುವಾರ ರಾಹುಲ್‌ ಅವರು ಭೇಟಿಯಾಗಿ ಈ ಕುರಿತು ಸಮಾಲೋಚನೆ ನಡೆಸಿದ್ದಾರೆ. 

ನವದೆಹಲಿ[ಫೆ.22]: ಪುಲ್ವಾಮಾ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ದೂರದೃಷ್ಟಿ ದಾಖಲೆ ಸಿದ್ಧಪಡಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾರ್ಯಪಡೆಯೊಂದನ್ನು ರಚನೆ ಮಾಡಿದ್ದಾರೆ. 

ಸರ್ಜಿಕಲ್ ಸ್ಟ್ರೈಕ್ ಅತಿಯಾದ ಪ್ರಚಾರ: ನಿವೃತ್ತ ಸೇನಾಧಿಕಾರಿ!

2016ರಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ನಡೆಸಿದ್ದ ಸರ್ಜಿಕಲ್‌ ದಾಳಿಯ ಹೀರೋ ಡಿ.ಎಸ್‌. ಹೂಡಾ ಅವರು ಆ ಕಾರ್ಯಪಡೆಗೆ ಮುಖ್ಯಸ್ಥರಾಗಿದ್ದಾರೆ. ಉತ್ತರ ವಲಯದ ಮಾಜಿ ಸೇನಾ ಕಮಾಂಡರ್‌ ಆಗಿರುವ ಹೂಡಾ ಅವರನ್ನು ಗುರುವಾರ ರಾಹುಲ್‌ ಅವರು ಭೇಟಿಯಾಗಿ ಈ ಕುರಿತು ಸಮಾಲೋಚನೆ ನಡೆಸಿದ್ದಾರೆ. ಮುಂದಿನ 5-10 ವರ್ಷಗಳ ವರೆಗಿನ ಭಾರತದ ರಕ್ಷಣಾ ವ್ಯವಸ್ಥೆ ಹೇಗಿರಬೇಕು ಎಂದು ಆಯ್ದ ಪರಿಣತರ ಜತೆ ಸಮಾಲೋಚನೆ ನಡೆಸಿದ ಬಳಿಕ ಒಂದು ತಿಂಗಳಿನಲ್ಲಿ ಹೂಡಾ ಅವರು ವರದಿ ನೀಡಲಿದ್ದಾರೆ.

ಸೆ.29ರಂದು ಸರ್ಜಿಕಲ್‌ ದಾಳಿ ದಿನವನ್ನಾಗಿ ಆಚರಿಸಲು ಸೂಚನೆ

2016ರ ಸೆಪ್ಟೆಂಬರ್’ನಲ್ಲಿ ಭಾರತದ ಗಡಿಯಾಚೆಗೆ ಸರ್ಜಿಕಲ್ ದಾಳಿ ನಡೆಸಿ ಉಗ್ರರನ್ನು ಸದೆಬಡಿಯುವಲ್ಲಿ ಭಾರತದ ಪಡೆ ಯಶಸ್ವಿಯಾಗಿತ್ತು. 40 ವರ್ಷಗಳ ಕಾಲ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿರುವ ಹೂಡಾ ಸರ್ಜಿಕಲ್ ದಾಳಿಯನ್ನು ಮುನ್ನಡೆಸಿದ್ದರು.
 

click me!