
ನ್ಯೂಯಾರ್ಕ್(ಜ.07) ತನ್ನ ಪ್ರೇಮ ನಿವೇದನೆಯನ್ನು ನಿರಾಕರಣೆ ಮಾಡಿದ್ದಕ್ಕೆ ಈ ಮಹಿಳೆ ಪ್ರಿಯಕರನಿಗೆ ಬರೋಬ್ಬರಿ ಒಂದು ಲಕ್ಷದ ಐವತ್ತೊಂಬತ್ತು ಸಾವಿರ ಟೆಕ್ಸ್ಟ್ ಮೆಸೇಜ್ ಕಳಿಸಿದ್ದಾಳೆ.
ಜಾಕ್ವಲಿನ್ ಎಡ್ಸ್ ಸಂದೇಶಗಳ ಸರಮಾಲೆ ಕಳಿಸಿದ ಗಟ್ಟಿಗಿತ್ತಿ. ವ್ಯಕ್ತಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ 31 ವರ್ಷದ ಈ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತ ಬಂದ್..ಏನಿರುತ್ತೇ? ಏನಿರಲ್ಲ?
ಕೇವಲ ಸಂದೇಶ ಕಳಿಸಿದ್ದಲ್ಲದೇ ಮಹಿಳೆ ವ್ಯಕ್ತಿಯ ಮನೆಗೆ ಹಲವಾರು ಸಾರಿ ನುಗ್ಗಿದ್ದರು. ನುಗ್ಗಿ ಮನೆಯ ಬಾತ್ ರೂಂ ಸಹ ಬಳಸಿದ್ದರು.
ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿರುವ ಮಹಿಳೆ ಪ್ಲೋರಿಡಾ ಮೂಲದವಳು. ಲಕ್ಷಗಟ್ಟಲೇ ಸಂದೇಶಗಳು ವಿನಂತಿ, ಬೆದರಿಕೆ, ಎಚ್ಚರಿಕೆಯನ್ನು ಒಳಗೊಂಡಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ