
ಕಠ್ಮಂಡು[ಜ.06]: ಮಕ್ಕಳು ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬುವುದನ್ನು ಖಚಿತಪಡಿಸಿಕೊಳ್ಳಲು ನೇಪಾಳ ಸರ್ಕಾರ ಕಾನೂನೊಂದನ್ನು ಜಾರಿಗೊಳಿಸುತ್ತಿದೆ. ಇದರ ಅನ್ವಯ ಮಕ್ಕಳು ತಮ್ಮ ಆದಾಯದ ಒಂದು ಭಾಗವನ್ನು ಹೆತ್ತವರ ಬ್ಯಾಂಕ್ ಖಾತೆಗೆ ಜಮೆ ಮಾಡುವುದು ಕಡ್ಡಾಯ, ಈ ಮಾಹಿತಿ ನೇಪಾಳ ಸರ್ಕಾರ ಹಿರಿಯ ಸಚಿವರು ಖಚಿತಪಡಿಸಿದ್ದಾರೆ.
ನೇಪಾಳ ಸರ್ಕಾರದ ವಕ್ತಾರ ಹಾಗೂ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಗೋಕುಲ್ ಪ್ರಸಾದ್ ಬಾಸ್ಕೋಟಾ ಈ ಕುರಿತಗಿ ಮಾಹಿತಿ ನೀಡುತ್ತಾ 'ಮಂತ್ರಿ ಮಂಡಲ ಸಭೆಯಲ್ಲಿ ಈ ಪ್ರಸ್ತಾವನೆಯೊಂದಿಗೆ ಹಿರಿಯ ನಾಗರಿಕ ಕಾಯ್ದೆ-2006' ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಜಾರಿಗೊಳಿಸಲು ತೀರ್ಮಾನಿಸಿದ್ದೇವೆ. ಈ ಮೂಲಕ ಹಿರಿಯ ನಾಗರಿಕರ ಸುರಕ್ಷತೆ ಕಾಪಾಡುವ ಉದ್ದೇಶ ನಮ್ಮದಾಗಿದೆ ' ಎಂದಿದ್ದಾರೆ.
ಮಸೂದೆ ಮಂಡನೆ ಹಿಂದಿನ ಕಾರಣವನ್ನು ತಿಳಿಸಿರುವ ಸಚಿವರು 'ಆಸ್ತಿ ಅಂತಸ್ತು ಹೊಂದಿರುವ ವ್ಯಕ್ತಿಗಳೂ ತಮ್ಮ ತಂದೆ ತಾಯಿಯನ್ನು ಕಡೆಗಣಿಸುತ್ತಿರುವುದು, ಕೀಳಾಗಿ ನೋಡುತ್ತಿರುವುದು ಮತ್ತು ಅವರೊಂದಿಗೆ ಕೆಟ್ಟದಾಗಿ ವ್ಯವಹರಿಸುವ ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಇಂತಹ ವ್ಯಕ್ತಿಗಳನ್ನು ಹತ್ತಿಕ್ಕಲು ಈ ಮಹತ್ವದ ಕಾನೂನು ಜಾರಿಗೊಳಿಸುತ್ತಿದ್ದೇವೆ. ಹಿರಿಯರ ಜೀವನವನ್ನು ಸುರಕ್ಷಿತವಾಗೊಳಿಸುವುದು ಕೂಡಾ ದೇಶಕ್ಕೆ ಘನತೆ ತಂದು ಕೊಡುತ್ತದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ