
ಪುದುಚೆರಿ(ಮೇ.11): ಕೆಲವು ತಿಂಗಳುಗಳಿಂದ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಅಲ್ಲಿನ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರಿಗೂ ಮನಸ್ಥಾಪ ನಡೆಯುತ್ತಿದೆ. ಇದು ಹಲವು ಘಟನೆಗೂ ಕಾರಣವಾಗಿದೆ.
ಆದರೆ ನಿನ್ನೆ ವಿರಸಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಸ್ಥಳೀಯ ಸಮಾರಂಭವೊಂದರಲ್ಲಿ ಇಬ್ಬರೂ ಮುಖಂಡರು ಪಾಲ್ಗೊಂಡಿದ್ದರು. ಮೂಲತಃ ಕಿರಣ್ ಬೇಟಿ ಅವರು ಉತ್ತರ ಭಾರತದವರು. ಅವರಿಗೆ ಹಿಂದಿ ಹಾಗೂ ಇಂಗ್ಲಿಷ್ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಪುದುಚೆರಿ ರಾಜ್ಯದ ಸ್ಥಳೀಯ ಭಾಷೆ ಬಹುತೇಕ ತಮಿಳು. ಇಂಗ್ಲಿಷ್'ನಲ್ಲಿ ಭಾಷಣ ಆರಂಭಿಸಿದ ಅವರು ಮಾತುಗಳನ್ನು ತಮಿಳಿಗೆ ಅನುವಾದಿಸಲು ಶಿಕ್ಷಣ ಸಚಿವ ಆರ್.ಕಮಲಕೃಷ್ಣನ್ ಅವರಿಗೆ ಸೂಚಿಸಿದರು. ಅವರು ತಾವು ಅನುವಾದಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ತಕ್ಷಣ ಜಾಗೃತಗೊಂಡ ಬೇಡಿ ಅವರು ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರ ನೆರವು ಕೋರಿದರು. ಪುದುಚೆರಿ ಸಿಎಂ ಬಹುಭಾಷ ಪಂಡಿತರು. ರಾಜಕೀಯ ವಿರಸ ಮರೆತು ಅನುವಾದ ಮಾಡಲು ಶುರು ಮಾಡಿದರು. ಬೇರೆ ಏನನ್ನು ಹೇಳಬೇಡಿ ತಾನು ಏನು ಹೇಳುತ್ತೀನೋ ಅದನ್ನು ಮಾತ್ರ ತರ್ಜುಮೆ ಮಾಡಿ ಎಂದು ಎಚ್ಚರಿಸಿದಾಗ ಜೋರಾಗಿ ನಕ್ಕು ಸಮ್ಮತಿ ಸೂಚಿಸಿದರು. ಇಬ್ಬರು ಪರಸ್ಪರ ರಾಜೀನಾಮೆ ನೀಡಬೇಕೆಂದು ಕೆಲವು ದಿನಗಳಿಂದ ಬಹಿರಂಗವಾಗವಾಗಿಯೇ ಬಾಯ್ದಾಡಿಕೊಂಡಿದ್ದರು.
ಕನ್ನಡ ಪ್ರಭಕ್ಕಾಗಿ http://kpepaper.asianetnews.com ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.