
ಟೋಕಿಯೋ(ಮೇ.11): ಸಾಮಾನ್ಯವಾಗಿ ಯಾರಾದರೂ ಮೃತಪಟ್ಟ ನಂತರ ಸಂಬಂಧಿಕರು ಹಾಗೂ ಹತ್ತಿರದವರು ಬರುವ ತನಕ ಒಂದಷ್ಟು ಗಂಟೆಗಳ ಕಾಲ ಇಟ್ಟುಕೊಳ್ಳುವುದು ಸಂಪ್ರದಾಯ. ಮಕ್ಕಳು ವಿದೇಶದಲ್ಲಿದ್ದರೆ ಒಂದೆರಡು ದಿನ ಶೀತ ಪೆಟ್ಟಿಗೆಯ ಮೂಲಕ ಇಟ್ಟುಕೊಳ್ಳುವುದು ರೂಢಿ. ಆದರೆ ಜಪಾನಿನ ಈ ಪ್ರತಿಷ್ಠಿತ ಹೋಟೆಲ್'ನಲ್ಲಿ ಅಲ್ಲಿನ ಜನರು ಮೃತದೇಹವನ್ನು ಇಡುತ್ತಾರೆ.
ಇದೇನಪ್ಪ ಉಪಹಾರ ಸೇವಿಸುವ ಹಾಗೂ ಉಳಿದುಕೊಳ್ಳುವ ಹೋಟೆಲ್'ಗಳಲ್ಲಿ ಮೃತದೇಹಗಳನ್ನು ಇಡುತ್ತಾರೆ ಎಂದುಕೊಳ್ಳಬೇಡಿ. ಇದಕ್ಕೆ ಇಂಟರೆಸ್ಟಿಂಗ್ ಕಾರಣವಿದೆ. ಜಪಾನ್ ಸಂಪ್ರದಾಯಗಳು ಕೂಡ ಭಾರತೀಯ ಸಂಸ್ಕೃತಿಯನ್ನು ಒಂದಿಷ್ಟು ಬೆಸೆದುಕೊಂಡಿದೆ. ಹೊಸಾಕೊ ಪ್ರದೇಶದಲ್ಲಿರುವ ಇಟಾಯಿ ಒಟಾರು ಎಂಬ ಹೆಸರಿನ ಹೋಟೆಲ್'ನಲ್ಲಿ ಮೃತದೇಹಗಳನ್ನು ಇಡಲಾಗುತ್ತದೆ.
ಹೋಟೆಲ್'ನಲ್ಲಿ ಒಂದಷ್ಟು ಗಂಟೆ ಅಥವಾ ಒಂದು ದಿನಗಳ ಕಾಲ ಇಟ್ಟು ಸ್ನೇಹಿತರ ಹಾಗೂ ಬಂಧುಗಳ ಅಂತಿಮ ವಿಧಿವಿಧಾನಗಳನ್ನು ಮುಗಿಸಿ ಸ್ಥಳಾವಕಾಶ ಸಿಕ್ಕ ನಂತರ ಶವಸಂಸ್ಕಾರ ನಡೆಸಲಾಗುತ್ತದೆ. ಮೃತದೇಹಗಳನ್ನು ಇಡುವುದಕ್ಕೆ ಕಾರಣ ಇಷ್ಟೆ. ಇಲ್ಲಿನ ಪ್ರದೇಶದಲ್ಲಿ ಸ್ಮಶಾನಗಳ ಕೊರತೆಯಿದೆ. ಹಾಲಿಯಿರುವ ಸ್ಮಶಾನಗಳು ಸಂಪೂರ್ಣ ಭರ್ತಿಯಾಗಿರುತ್ತವೆ. ಈ ಹಿನ್ನಲೆಯಲ್ಲಿ ಸ್ಥಳಾವಕಾಶ ದೊರೆಯುವ ತನಕ ಇಟಾಯಿ ಒಟಾರು ಹೋಟೆಲ್'ನಲ್ಲಿ ಮೃತದೇಹಗಳನ್ನು ಇಡಲಾಗುತ್ತದೆ. ಉತ್ತಮ ಸೌಲಭ್ಯ ಹೊಂದಿರುವ ಈ ಹೋಟೆಲ್ ಅತ್ಯಂತ ಶುಚಿಯಾಗಿದೆ. ಎಲ್ಲ ವರ್ಗದ ಜನರಿಗೆ ಅವರ ಆರ್ಥಿಕ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳನ್ನು ನೀಡುವ ಕಾರಣ ಮೃತದೇಹಗಳನ್ನು ಇಡಲು ಬಳಸುತ್ತಾರೆ.
ಕನ್ನಡ ಪ್ರಭಕ್ಕಾಗಿ http://kpepaper.asianetnews.com ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.