'ಸಾಲ ಮನ್ನಾ ಮಾಡುವುದು ಫ್ಯಾಷನ್ ಆಗಿದೆ' ವೆಂಕಯ್ಯ ನಾಯ್ಡು ವಿವಾದಾತ್ಮಕ ಹೇಳಿಕೆ

By Suvarna Web DeskFirst Published Jun 22, 2017, 1:00 PM IST
Highlights

ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ ಬೆನ್ನಲ್ಲೇ ಕೇಂದ್ರ ಸಚಿವ ವೆಂಕಯ್ಯ ನಾಯ್ಡು  ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಾಲ ಮನ್ನಾ ಮಾಡೋದು ಫ್ಯಾಷನ್ ಆಗಿದೆ ಎಂದಿರುವ ನಾಯ್ಡು ಅವರ ಮಾತು ರಾಜ್ಯ ಸರ್ಕಾರವನ್ನು ಲೇವಡಿ ಮಾಡಿದಂತಿದೆ.

ಮುಂಬೈ(ಜೂ.22): ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ ಬೆನ್ನಲ್ಲೇ ಕೇಂದ್ರ ಸಚಿವ ವೆಂಕಯ್ಯ ನಾಯ್ಡು  ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಾಲ ಮನ್ನಾ ಮಾಡೋದು ಫ್ಯಾಷನ್ ಆಗಿದೆ ಎಂದಿರುವ ನಾಯ್ಡು ಅವರ ಮಾತು ರಾಜ್ಯ ಸರ್ಕಾರವನ್ನು ಲೇವಡಿ ಮಾಡಿದಂತಿದೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕೇಂದ್ರ ನಗರಾಭಿವೃಧ್ಧಿ ಸಚಿವ ವೆಂಕಯ್ಯ ನಾಯ್ಡು ಸಾಲಮನ್ನಾ ವಿಚಾರವನ್ನು ಪ್ರಸ್ತಾಪಿಸುತ್ತಾ 'ಸಾಲಮನ್ನಾ ಮಾಡುವುದು ಈಗ ಶೋಕಿಯಾಗಿ ಬಿಟ್ಟಿದೆ. ಸಾಲ ಮನ್ನಾವೊಂದೇ ಎಲ್ಲದಕ್ಕೂ ಪರಿಹಾರವಲ್ಲ. ನಾವು ರೈತರ ಮೇಲೆ ಕಾಳಜಿ ವಹಿಸಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಸಾಲಮನ್ನಾ ಮಾಡಬೇಕು' ಎಂದಿದ್ದಾರೆ. ನಿನ್ನೆಯಷ್ಟೇ ಕರ್ನಾಟಕ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಇದರ ಬೆನ್ನಲ್ಲೇ ಕೇಂದ್ರ ಸಚಿವರು ಇಂತಹ ಹೇಳಿಕೆ ನೀಡಿರುವುದು ರಾಜ್ಯ ಸರ್ಕಾರದ ನಡೆಯನ್ನು  ಲೇವಡಿ ಮಾಡಿದಂತಿದೆ.

ಿದೇ ಸಂದರ್ಭದಲ್ಲಿ ವೆಂಕಯ್ಯ ನಾಯ್ಡು ಏರ್ ಇಂಡಿಯಾ ವಿಚಾರದ ಕುರಿತಾಗಿಯೂ ಮಾತನಾಡಿದ್ದಾರೆ.

click me!