
ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕನ್ನಡ ಸಿನಿಮಾಗಳಲ್ಲಿ ನೂರಾರು ಇಂಪಾದ ಹಾಡುಗಳನ್ನು ಹಾಡಿದ ಖ್ಯಾತ ಹಿನ್ನಲೆ ಗಾಯಕ ಎಲ್.ಎನ್. ಶಾಸ್ತ್ರಿ ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಾಸ್ತ್ರಿಯವರು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಕರಳು ಕ್ಯಾನ್ಸ್'ರ್'ಗೆ ತುತ್ತಾಗಿದ್ದ ಶಾಸ್ತ್ರಿ ನಡೆಯಲು ಸಾಧ್ಯವಾಗದೆ ಹಾಸಿಗೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆರ್ಥಿಕವಾಗಿ ಕಂಗಾಲಾಗಿದ್ದ ಎಲ್. ಎನ್. ಶಾಸ್ತ್ರಿ ಸಹಾಯ ಹಸ್ತಕ್ಕಾಗಿ ಮನವಿ ಮಾಡಿಕೊಂಡಿದ್ದರು.
ಶಿವರಾಜ್ ಕುಮಾರ್ ಅಭಿನಯದ "ಜನುಮದ ಜೋಡಿ" ಚಿತ್ರದ "ಕೋಲು ಮಂಡೆ ಜಂಗಮ ದೇವಾ, ಮಲ್ಲ ಚಿತ್ರದ 'ಕರುನಾಡೆ, ಶ್ 'ಅವನಲ್ಲಿ, ಇವಳಲ್ಲಿ, 'ಎ' ಚಿತ್ರದ ಚಾಂದಿನಿ, 'ಇಳಕೊಳ್ಳೋಕ್ಕೆ ಒಂದು ಊರು' ಹಾಗೂ ಇತ್ತೀಚಿನ ಅಧ್ಯಕ್ಷ ಚಿತ್ರದ ' ಅಧ್ಯಕ್ಷ ಅಧ್ಯಕ್ಷ' ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು. ಜನುಮದ ಜೋಡಿ ಚಿತ್ರದ "ಕೋಲು ಮಂಡೆ ಜಂಗಮ ದೇವಾ' ಹಾಡಿಗೆ ಅತ್ಯುತ್ತಮ ಹಿನ್ನಲೆ ಗಾಯಕನಾಗಿ ರಾಜ್ಯ ಪ್ರಶಸ್ತಿ ಕೂಡ ದೊರಕಿದೆ. ಹಾಡುಗಳ ಜೊತೆ ಹಲವು ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.