
ಕಾರವಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ತಾಲೂಕಿನ ಅರ್ಗಾದ ನೌಕಾನೆಲೆಯಲ್ಲಿ ಶನಿವಾರ ರಾಜ್ಯದ ಶಾಸಕರಿಗಾಗಿ ನೌಕಾನೆಲೆ ವೀಕ್ಷಣೆ ಏರ್ಪಡಿಸಲಾಗಿತ್ತು. ವಿಧಾನಸಭೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಚಿವರಾದ ಎಚ್. ಆಂಜನೇಯ, ಉಮಾಶ್ರೀ, ರಾಜ್ಯ ಸರ್ಕಾರದ ಮುಖ್ಯ ಸಚೇತಕರಾದ ಐವಾನ್ ಡಿಸೋಜ, ಅಶೋಕ್ ಪಟ್ಟಣ ಸೇರಿದಂತೆ ಶಾಸಕರು ಎರಡು ಬಸ್‌ಗಳ ಮೂಲಕ ಸೀಬರ್ಡ್ ನೌಕಾ ನೆಲೆಗೆ ಭೇಟಿ ನೀಡಿದ್ದರು.
ನೌಕಾನೆಲೆ ವೀಕ್ಷಣೆ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಚ್. ಆಂಜನೇಯ ಅವರು, ಕದಂಬ ನೌಕಾ ನೆಲೆಯಲ್ಲಿ ಐಎನ್‌ಎಸ್ ಆದಿತ್ಯ, ಐಎನ್‌ಎಸ್ ವಿಕ್ರಮಾದಿತ್ಯ ಹಾಗೂ ಐಎನ್‌ಎಸ್ ಮಕರ ನೌಕೆಗಳನ್ನು ನೋಡಿಕೊಂಡು ಅವುಗಳ ಕಾರ್ಯವೈಖರಿ ಬಗ್ಗೆ ತಿಳಿದುಕೊಂಡು ಬಂದಿದ್ದೇವೆ ಎಂದರು. ಪ್ರಕೃತಿ ವಿಕೋಪ ಅಥವಾ ಇನ್ನಾವುದೇ ಸಂದರ್ಭದಲ್ಲಿ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ ವ್ಯಕ್ತಿಗಳನ್ನು ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು ಎಂದ ಸಚಿವರು,
ನೌಕಾನೆಲೆ ನಿರತರ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಸರ್ಕಾರ ಮಟ್ಟದಲ್ಲೇ ಪ್ರಯತ್ನ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಸಚಿವೆ ಉಮಾಶ್ರೀ ಮಾತನಾಡಿ,ಇಂತಹ ನೌಕೆ ನಮ್ಮ ದೇಶದಲ್ಲಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು. ವೈಖರಿ ಶ್ಲಾಘನೀಯ ಎಂದು ಅಭಿಪ್ರಾಯಿಸಿದರು. ವಿಧಾನ ಸಭೆ, ವಿಧಾನ ಪರಿಷತ್ ಸದಸ್ಯರು, ರಾಜ್ಯ ಸರ್ಕಾರದ ಕಾರ್ಯದರ್ಶಿಗಳನ್ನೊಳಗೊಂಡು 140-150 ಮಂದಿ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.