ಏಕಕಾಲದಲ್ಲೇ ಚುನಾವಣೆ ನಡೆದರೆ ಇವಿಎಂ ಖರೀದಿಗೆ 4555 ಕೋಟಿ ಬೇಕು..!

By Web DeskFirst Published Sep 4, 2018, 10:47 AM IST
Highlights

ಏಕಕಾಲದಲ್ಲಿ ಚುನಾವಣೆ ನಡೆದರೆ ಪ್ರಸ್ತುತ 12.9 ಲಕ್ಷ ಬ್ಯಾಲೆಟ್ ಯೂನಿಟ್‌ಗಳು ಮತ್ತು 9.4 ಲಕ್ಷ ಕಂಟ್ರೋಲ್ ಯೂನಿಟ್‌ಗಳು ಮತ್ತು 12.3 ಲಕ್ಷ ವಿವಿಪ್ಯಾಟ್‌ಗಳ ಕೊರತೆ ಎದುರಾಗಲಿದೆ ಎಂದಿದೆ ಆಯೋಗದ ವರದಿ.

ನವದೆಹಲಿ[ಸೆ.04]: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು ಅನಿವಾರ್ಯವೇ ಆದಲ್ಲಿ, ಹೊಸ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಖರೀದಿಸಲು 4555 ಕೋಟಿ ರು. ಅಗತ್ಯವಿದೆ ಎಂದು ಕಾನೂನು ಆಯೋಗ ತಿಳಿಸಿದೆ. 

ಕಳೆದ ವಾರ ಬಿಡುಗಡೆಯಾದ ಆಯೋಗದ ಕರಡು ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಆಯೋಗದ ಪ್ರಕಾರ, 2019ರ ಲೋಕಸಭಾ ಚುನಾವಣೆಗೆ ದೇಶದಲ್ಲಿ 10,60,000 ಮತದಾನ ಕೇಂದ್ರಗಳನ್ನು ಸಿದ್ಧಪಡಿಸಲಾಗುತ್ತದೆ. 

ಏಕಕಾಲದಲ್ಲಿ ಚುನಾವಣೆ ನಡೆದರೆ ಪ್ರಸ್ತುತ 12.9 ಲಕ್ಷ ಬ್ಯಾಲೆಟ್ ಯೂನಿಟ್‌ಗಳು ಮತ್ತು 9.4 ಲಕ್ಷ ಕಂಟ್ರೋಲ್ ಯೂನಿಟ್‌ಗಳು ಮತ್ತು 12.3 ಲಕ್ಷ ವಿವಿಪ್ಯಾಟ್‌ಗಳ ಕೊರತೆ ಎದುರಾಗಲಿದೆ ಎಂದಿದೆ ಆಯೋಗದ ವರದಿ.

click me!